Friday, 13th December 2024

ನಾಳೆ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಐಸಿಎಸ್‌ಇ 10ನೇ ತರಗತಿಯ ಫಲಿತಾಂಶ ಜು.17ರಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ.

ಐಸಿಎಸ್‌ಇ ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಶನಿವಾರ ಮಾಹಿತಿ ನೀಡಿದ್ದು, ಐಸಿಎಸ್‌ಇ 10ನೇ ತರಗತಿಯ ಫಲಿತಾಂಶಗಳನ್ನು ಜು.17 ರಂದು ಪ್ರಕಟಿಸಲಾಗುವುದು ಮತ್ತು ಅಂತಿಮ ಅಂಕಗಳ ನೀಡಿಕೆ ಯಲ್ಲಿ ಮೊದಲ ಮತ್ತು ಎರಡನೇ ಸೆಮಿಸ್ಟರ್‌ಗಳ ಅಂಕಗಳನ್ನು ಸಮಾನ ವಾಗಿ ಪರಿಗಣಿಸಲಾಗುತ್ತದೆ.

ಸೆಮಿಸ್ಟರ್ 1 ಅಥವಾ ಸೆಮಿಸ್ಟರ್ 2 ಪರೀಕ್ಷೆಗಳಿಗೆ ಹಾಜರಾಗದ ಅಭ್ಯರ್ಥಿ ಗಳನ್ನು ಗೈರುಹಾಜರೆಂದು ಗುರುತಿಸಲಾಗುತ್ತದೆ ಮತ್ತು ಅವರ ಫಲಿತಾಂಶ ಗಳನ್ನು ಪ್ರಕಟಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಫಲಿತಾಂಶಗಳನ್ನು CISCE ಯ CAREERS ಪೋರ್ಟಲ್‌ನಲ್ಲಿ ವೆಬ್‌ ಸೈಟ್‌ನಲ್ಲಿ ಮತ್ತು SMS ಮೂಲಕ ಲಭ್ಯವಾಗುವಂತೆ ಮಾಡಲಾಗು ವುದು. ICSE ಪರೀಕ್ಷೆಯ ಫಲಿತಾಂಶಗಳ ಲೆಕ್ಕಾಚಾರಕ್ಕಾಗಿ, ಸೆಮಿಸ್ಟರ್ 1 ಮತ್ತು ಸೆಮಿಸ್ಟರ್ 2 ಪರೀಕ್ಷೆಗಳಿಗೆ ಸಮಾನ ಪರಿಗಣನೆ ನೀಡಲಾಗಿದೆ.

ಸೆಮಿಸ್ಟರ್ 1, ಸೆಮಿಸ್ಟರ್ 2 ಮತ್ತು ಪ್ರಾಜೆಕ್ಟ್ (ಆಂತರಿಕ ಮೌಲ್ಯಮಾಪನ) ಅಂಕಗಳನ್ನು, ಪ್ರತಿಯೊಂದು ವಿಷಯಗಳು ಮತ್ತು ಪತ್ರಿಕೆಗಳ ಅಂತಿಮ ಅಂಕಗಳನ್ನು ಪರಿಗಣಿಸಲಾಗುತ್ತದೆ ಎಂದು ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ ನ ಮುಖ್ಯ ಕಾರ್ಯನಿರ್ವಾಹಕ ಮತ್ತು ಕಾರ್ಯದರ್ಶಿ ಅರಾಥೂನ್ ಹೇಳಿದರು.