Saturday, 14th December 2024

ಐಸಿಎಸ್‌ಇ 10 ನೇ ತರಗತಿ ಪರೀಕ್ಷೆ ರದ್ದು

ನವದೆಹಲಿ: ದೇಶದಲ್ಲಿ ಕರೋನಾ ಹರಡುವಿಕೆ ಮಿತಿ ಮೀರುತ್ತಿದ್ದು ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವು ದಾಗಿ ಘೋಷಿಸಲಾಗಿದೆ.

12 ನೇ ತರಗತಿಯ ಪರೀಕ್ಷೆಗಳು ಆಫ್ ಲೈನ್ ನಲ್ಲಿ ನಡೆಯಲಿವೆ. 12ನೇ ತರಗತಿ ಪರೀಕ್ಷೆ ನಡೆಸಲು ದಿನಾಂಕವನ್ನು ಪ್ರಕಟಿಸ ಲಾಗುವುದು.

ಕೋವಿಡ್ ಸೋಂಕಿತರ ಸಂಖ್ಯೆ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ 10 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಿರುವುದಾಗಿ CISCE ತಿಳಿಸಿದೆ. ಅನೇಕ ರಾಜ್ಯಗಳಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ಈಗ CISCE ಕೂಡ ಐಸಿಎಸ್‌ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ.