Friday, 13th December 2024

ಪಟಾಕಿ ಕಾರ್ಖಾನೆ ದುರಂತ: ಮಗು ಸೇರಿ ಮೂವರ ಸಾವು

ಚೆನ್ನೈ: ತಮಿಳುನಾಡಿನಲ್ಲಿ ಪಟಾಕಿ ದುರಂತ ಸಂಭವಿಸಿದ್ದು, ಪ್ರಕರಣದಲ್ಲಿ 5 ವರ್ಷದ ಮಗು ಸೇರಿ ಮೂವರು ಮೃತಪಟ್ಟಿ ದ್ದಾರೆ.

ತಮಿಳುನಾಡಿನ ಸತ್ತೂರು ಜಿಲ್ಲೆಯ ಥಾಯಿಲ್ ಪಟ್ಟಿಯ ಕಲೈನರ್ ಕಾಲನಿ ಯಲ್ಲಿರುವ ಮನೆಯಲ್ಲಿ ಪಟಾಕಿ ತಯಾರಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಮೃತರನ್ನು 35 ವರ್ಷದ ಸೆಲ್ವಂಮಣಿ, ಅವರ 5 ವರ್ಷದ ಪುತ್ರ ಹಾಗೂ 35 ವರ್ಷದ ಕರ್ಪಾಗಂ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರ್ಯ ಮತ್ತು ಪ್ರಭಾಕರ್ ಅವರನ್ನು ಸಮೀಪದ ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸ್ಫೋಟದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಮೂರು ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿವೆ. ಸ್ಫೋಟದ ತೀವ್ರತೆಯಿಂದಾಗಿ ಇಡೀ ಮನೆ ಜಖಂಗೊಂಡಿದೆ

ಇದೊಂದು ಅಕ್ರಮ ಪಟಾಕಿ ತಯಾರಿಕಾ ಘಟಕವಾಗಿದ್ದು, ಮನೆಯಲ್ಲೇ ಪಟಾಕಿ ತಯಾರಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.