Monday, 14th October 2024

ಭಾರತವು ಚೀನಾಕ್ಕೆ ಶರಣಾಗಬೇಕೆಂದು ಕೈ ನಾಯಕ ಬಯಸುತ್ತಿದ್ದಾರೆ: ಬಿಜೆಪಿ ಆರೋಪ

ನವದೆಹಲಿ: ಗಡಿ ಉದ್ವಿಗ್ನತೆಯ ಕುರಿತು ಇತ್ತೀಚಿನ ಹೇಳಿಕೆಗಳ ಬಗ್ಗೆ ರಾಹುಲ್ ಗಾಂಧಿ ಅವರು ‘ಶಾಶ್ವತವಾಗಿ ಗೊಂದಲಕ್ಕೊಳ ಗಾಗಿದ್ದಾರೆ’ ಎಂದು ಲೇವಡಿ ಮಾಡಿರುವ ಬಿಜೆಪಿ, ಭಾರತವು ಚೀನಾದ ಮುಂದೆ ಶರಣಾಗ ಬೇಕೆಂದು ಕಾಂಗ್ರೆಸ್ ನಾಯಕ ಬಯಸು ತ್ತಿದ್ದಾರೆ ಎಂದು ಆರೋಪಿಸಿದೆ.
ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ವ್ಯಂಗ್ಯವಾಡಿದರು ಮತ್ತು ಕಾಂಗ್ರೆಸ್ ನಾಯಕ ತಮ್ಮ ಪ್ರಯಾಣದ ಸಮಯದಲ್ಲಿ ಗೊಂದಲ ಕ್ಕೀಡಾಗಿದ್ದಾರೆ ಎಂದು ಹೇಳಿದರು.

ದೇಶದಾದ್ಯಂತ ಸಂಚರಿಸುವುದರಿಂದ ಮಾತ್ರ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತೀಯತೆಯನ್ನು ಅವರು ಅರ್ಥಮಾಡಿಕೊಳ್ಳಬೇಕು. ಭಾರತದ ಆವಿ ಷ್ಕಾರವು ನಾಲ್ಕು ತಲೆಮಾರುಗಳಿಂದ (ಗಾಂಧಿ ಕುಟುಂಬ) ನಡೆಯುತ್ತಿದೆ ಎಂದು ತ್ರಿವೇದಿ ಅವರು ಜವಾಹರಲಾಲ್ ನೆಹರು ಅವರ ‘ಡಿಸ್ಕವರಿ ಆಫ್ ಇಂಡಿಯಾ’ ಬಗ್ಗೆ ಉಲ್ಲೇಖಿಸಿದರು.

ಸಂದರ್ಶನದಲ್ಲಿ ಗಡಿ ಉದ್ವಿಗ್ನತೆಯ ಕುರಿತು ರಾಹುಲ್ ಗಾಂಧಿಯವರ ಟೀಕೆಗಳನ್ನು ಉಲ್ಲೇ ಖಿಸಿದ ತ್ರಿವೇದಿ, ‘ತಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ನಡೆದಂತೆಯೇ ಚೀನಾದ ಮುಂದೆ ಭಾರತ ಶರಣಾಗಬೇಕು ಎಂದು ರಾಹುಲ್ ಗಾಂಧಿ ಬಯಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಚೀನಾದ ಬಗ್ಗೆ ಅವರ ಹೇಳಿಕೆಯು ಭಾರತವು ಚೀನಾಕ್ಕೆ ತಲೆಬಾಗಬೇಕು ಎಂಬುದನ್ನು ಸೂಚಿಸುತ್ತದೆ’ ಎಂದು ತ್ರಿವೇದಿ ತಿಳಿಸಿದ್ದಾರೆ.

Read E-Paper click here