Saturday, 14th December 2024

ಪಾಕಿಸ್ತಾನ ನೌಕಾಪಡೆಯಿಂದ ಭಾರತೀಯ ಮೀನುಗಾರನ ಹತ್ಯೆ

ಮುಂಬೈ: ಪಾಕಿಸ್ತಾನ ನೌಕಾಪಡೆಯು ಗುಜರಾತ್ ಕರಾವಳಿಯಲ್ಲಿ ಒಬ್ಬ ಭಾರತೀಯ ಮೀನುಗಾರನನ್ನು ಹತ್ಯೆ ಮಾಡಿದೆ ಎನ್ನಲಾಗಿದೆ.

ಗುಜರಾತ್ ಕರಾವಳಿಯಲ್ಲಿ ಒಬ್ಬ ಭಾರತೀಯ ಮೀನುಗಾರನನ್ನು ಪಾಕಿಸ್ತಾನ ನೌಕಾಪಡೆ ಹತ್ಯೆ ಮಾಡಿದ್ದು, ಗುಜರಾತ್‌ನ ದ್ವಾರಕಾದಲ್ಲಿ ಓಖಾ ಪಟ್ಟಣದ ಬಳಿ ‘ಜಲ್‌ಪರಿ’ ಎಂಬ ಹೆಸರಿನ ಬೋಟ್‌ನಲ್ಲಿ ಪಾಕಿಸ್ತಾನದ ನೌಕಾಪಡೆ ಗುಂಡಿನ ದಾಳಿ ನಡೆಸಿದೆ.

ದಾಳಿಯಲ್ಲಿ ಓರ್ವ ಮೀನುಗಾರ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.