Monday, 9th December 2024

Indian Raw Agent: ಪನ್ನುನ್‌ ಹತ್ಯೆಗೆ ಸಂಚು ಆರೋಪ ಹೊತ್ತಿರುವ ಮಾಜಿ ʻರಾʼ ಏಜೆಂಟ್‌ ವಿಕಾಸ್‌ ಯಾದವ್‌ ಬಗ್ಗೆ ಶಾಕಿಂಗ್‌ ಸಂಗತಿ ಲೀಕ್!

indian raw agent

ನವದೆಹಲಿ: ಖಲಿಸ್ತಾನಿ ಉಗ್ರ ಗುರುಪತ್‌ವಂತ್ ಸಿಂಗ್ ಪನ್ನುನ್(Gurpatwant Singh Pannun) ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಅಮೆರಿಕದ ಎಫ್‌ಬಿಐ‍(FBI)ಗೆ ಬೇಕಾಗಿರುವ ಭಾರತದ ಮಾಜಿ ʻರಾʼ ಏಜೆಂಟ್‌(Indian Raw Agent) ವಿಕಾಸ್‌ ಯಾದವ್(Vikash Yadav) ಅವರನ್ನು ಕೊಲೆ ಯತ್ನ ಮತ್ತು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕವು 10 ತಿಂಗಳ ಹಿಂದೆ ಬಂಧಿಸಿರುವ ವಿಚಾರ ಬಯಲಾಗಿದೆ. ದೂರುದಾರ, ದೆಹಲಿ ಮೂಲದ ಉದ್ಯಮಿಯೋರ್ವ ವಿಕಾಸ್‌ ಯಾದವ್‌ ವಿರುದ್ಧ ದೂರು ನೀಡಿದ್ದು, ಆತನಿಗೆ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ ಜತೆ ನಂಟು ಇತ್ತು ಎನ್ನಲಾಗಿದೆ.

ಡಿಸೆಂಬರ್ 2023 ರಲ್ಲಿ ದಾಖಲಾದ ಪ್ರಕರಣದಲ್ಲಿ ವಿಕಾಸ್‌ ಜೊತೆಗೆ ಇನ್ನೊಬ್ಬ ವ್ಯಕ್ತಿಯನ್ನು ಸಹ ಬಂಧಿಸಲಾಯಿತು. ಏಪ್ರಿಲ್ 2024 ರಲ್ಲಿ ವಿಕಾಸ್‌ಗೆ ಜಾಮೀನು ಸಿಕ್ಕಿತು. 2023 ರ ಡಿಸೆಂಬರ್‌ನಲ್ಲಿ ಉದ್ಯಮಿ ದೆಹಲಿ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣವು ಮೊದಲು ಬೆಳಕಿಗೆ ಬಂದಿತು. ತಾನು ಹಿರಿಯ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಳ್ಳುವ ವಿಕಾಸ್‌ ನವೆಂಬರ್‌ನಲ್ಲಿ ಪರಿಚಿತನಾಗಿದ್ದ ಎಂದು ಉದ್ಯಮಿ ಹೇಳಿಕೊಂಡಿದ್ದಾನೆ.

ಐಟಿ ಕಂಪನಿಯನ್ನು ನಡೆಸುತ್ತಿರುವ ಮತ್ತು ಪಶ್ಚಿಮ ಏಷ್ಯಾದ ಹಲವಾರು ಭಾರತೀಯರೊಂದಿಗೆ ಸಂಪರ್ಕ ಹೊಂದಿರುವ ಉದ್ಯಮಿ ಶೀಘ್ರದಲ್ಲೇ ವಿಕಾಸ್‌ ಅವರೊಂದಿಗೆ ಸ್ನೇಹ ಬೆಳೆಸಿದರು ಮತ್ತು ಪರಸ್ಪರ ಫೋನ್‌ ನಂಬರ್‌ ಕೂಡ ಹಂಚಿಕೊಂಡಿದ್ದರು. ಉದ್ಯಮಿ ತನ್ನ ದೂರಿನಲ್ಲಿ, ವಿಕಾಶ್ ತಾನು ಸೀಕ್ರೆಟ್‌ ಏಜೆಂಟ್ ಎಂದು ಹೇಳಿದ್ದಾನೆ ಆದರೆ ತನ್ನ ಕೆಲಸ ಮತ್ತು ಕಚೇರಿಯ ಮಾಹಿತಿಯನ್ನು ಎಂದಿಗೂ ಹಂಚಿಕೊಂಡಿಲ್ಲ ಎಂದು ಹೇಳಿದ್ದಾರೆ.

ಡಿಸೆಂಬರ್ 11 ರಂದು ಪ್ರಮುಖ ವಿಷಯದ ಬಗ್ಗೆ ಚರ್ಚಿಸುವ ನೆಪದಲ್ಲಿ ವಿಕಾಶ್ ಅವರನ್ನು ಲೋಧಿ ರಸ್ತೆಗೆ ಕರೆದಿದ್ದರು ಆಗಮಿಸಿದ ನಂತರ, ಉದ್ಯಮಿಯನ್ನು ವಿಕಾಸ್‌ ಮತ್ತು ಇನ್ನೊಬ್ಬ ವ್ಯಕ್ತಿ ಅಪಹರಿಸಿ ಡಿಫೆನ್ಸ್ ಕಾಲೋನಿ ಪ್ರದೇಶದ ಫ್ಲಾಟ್‌ಗೆ ಕರೆದೊಯ್ದರು ಎಂದು ಉದ್ಯಮಿ ದೂರಿನಲ್ಲಿ ಹೇಳಿದ್ದಾರೆ. ಉದ್ಯಮಿ ಹೇಳುವ ಪ್ರಕಾರ, ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಉದ್ಯಮಿಯನ್ನು ಕೊಲ್ಲಲು ಸುಪಾರಿ ನೀಡಿದ್ದರು ಎಂದು ವಿಕಾಸ್‌ ಬಹಿರಂಗಪಡಿಸಿದ್ದಾನೆ. ಉದ್ಯಮಿಯ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಉಂಗುರ ದೋಚಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಭೀಕರ ಪರಿಣಾಮ ಬೀರುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿದ್ದೂ ನಂತರ, ಯಾದವ್ ಮತ್ತು ಅವನ ಸಹಚರರು ಅವನನ್ನು ರಸ್ತೆಬದಿಯಲ್ಲಿ ಬಿಟ್ಟು ಓಡಿ ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 18 ರಂದು ಉದ್ಯಮಿಯ ದೂರಿನ ಮೇರೆಗೆ ದೆಹಲಿ ಪೊಲೀಸರು ವಿಕಾಸ್‌ ಮತ್ತು ಆತನ ಸಹಚರನನ್ನು ಬಂಧಿಸಿದ್ದರು. ಅಪಹರಣ, ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿದೆ. ಇನ್ನು ವಿಕಾಸ್‌ ತನ್ನ ತಂದೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ನಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು 2007 ರಲ್ಲಿ ನಿಧನರಾದರು. ಇನ್ನು ದುಡ್ಡಿನಾಸೆಯಿಂದ ಉದ್ಯಮಿಯನ್ನು ಅಪಹರಿಸಿರುವುದಾಗಿ ಎಂದು ಒಪ್ಪಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ: Gurpatwant Singh Pannun: ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆಗೆ ಮಾಜಿ ʻರಾʼ ಅಧಿಕಾರಿ ಯತ್ನ; ಅಮೆರಿಕ ಆರೋಪ