ಶ್ರೀನಗರ: ಉಧಂಪುರ-ಶ್ರೀನಗರ-ಬಾರಾಮುಲ್ಲಾ(Udhampur-Srinagar-Baramulla) ರೈಲು ಸಂಪರ್ಕ ನಿರ್ಮಾಣ ಕಾಮಗಾರಿ ಕೆಲಸವು ಪೂರ್ಣಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ (Union Minister of Railways) ಅಶ್ವಿನಿ ವೈಷ್ಣವ್(Ashwini Vaishnaw) ಶುಕ್ರವಾರ(ಡಿ.13) ತಿಳಿಸಿದ್ದಾರೆ.
Historic milestone; Final track work on the Udhampur-Srinagar-Baramulla Rail link is complete.
— Ashwini Vaishnaw (@AshwiniVaishnaw) December 13, 2024
The ballast-less track work for the 3.2 km-long Tunnel T-33, located at the foothills of Shri Mata Vaishno Devi Shrine and connecting Katra to Reasi, was successfully completed today… pic.twitter.com/VUZTTi61A7
ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ರೈಲ್ವೆ ಸಚಿವರು ಬರೆದುಕೊಂಡಿದ್ದಾರೆ. “ಐತಿಹಾಸಿಕ ಮೈಲಿಗಲ್ಲು; ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕದ ಅಂತಿಮ ಕಾಮಗಾರಿ ಕೆಲಸ ಪೂರ್ಣಗೊಂಡಿದೆ. 3.2 ಕಿಮೀ ಉದ್ದದ ಸುರಂಗ T-33 ಗಾಗಿ, ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಮಾತಾ ವೈಷ್ಣೋ ದೇವಿ ದೇಗುಲ ಮತ್ತು ಕತ್ರಾವನ್ನು ರಿಯಾಸಿಗೆ ಸಂಪರ್ಕಿಸುತ್ತದೆ. ಇಂದು ಮಧ್ಯಾಹ್ನ 02:00 ಗಂಟೆಗೆ ರೈಲ್ವೆ ಸಂಪರ್ಕ ಕೆಲಸ ಯಶಸ್ವಿಯಾಗಿ ಪೂರ್ಣಗೊಂಡಿದೆ” ಎಂದಿದ್ದಾರೆ.
ಭಾರತದ ರೈಲ್ವೆ ಸಂಪರ್ಕದಲ್ಲಿ ಇದು ಪ್ರಮುಖ ಮೈಲುಗಲ್ಲು. 2025ರ ಜನವರಿಯಲ್ಲಿ ರಾಷ್ಟ್ರ ರಾಜಧಾನಿ, ಶ್ರೀನಗರ, ಜಮ್ಮು ಮತ್ತು ಕಾಶ್ಮೀರದ ನಡುವೆ ಮೊದಲ ನೇರ ರೈಲು ಸೇವೆ ಆರಂಭವಾಗುವ ನಿರೀಕ್ಷೆಯಿದೆ. ವಂದೇ ಭಾರತ್ ರೈಲಿನ ಮೂರನೇ ಆವೃತ್ತಿಯು ನವ ದೆಹಲಿ-ಶ್ರೀನಗರ ಸ್ಲೀಪರ್ ರೈಲು ಆಗಿರುತ್ತದೆ, ಇದು ಕೇವಲ 13 ಗಂಟೆಗಳಲ್ಲಿ 800-ಕಿಲೋಮೀಟರ್ ನಷ್ಟು ಪ್ರಯಾಣ ಬೆಳೆಸುತ್ತದೆ ಎನ್ನಲಾಗಿದೆ.
ಮುಂದಿನ ತಿಂಗಳು, ಪ್ರಧಾನಿ ನರೇಂದ್ರ ಮೋದಿ ಅವರು ರಿಯಾಸಿ ಮತ್ತು ಕತ್ರಾ ನಡುವಿನ 272-ಕಿಲೋಮೀಟರ್ಗಳ ಬೃಹತ್ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಲಿಂಕ್ (USBRL) ಯೋಜನೆಯ ಕೊನೆಯ 17 ಕಿಲೋಮೀಟರ್ಗಳನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂಬ ಮಾಹಿತಿಯಿದೆ.
ಯುಎಸ್ಬಿಆರ್ಎಲ್ ಪ್ರಾಜೆಕ್ಟ್ ಪೂರ್ಣಗೊಳ್ಳಲ್ಲಿದ್ದು, ಕಾಶ್ಮೀರ ಮತ್ತು ದೆಹಲಿ ನಡುವೆ ನೇರ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸುವುದರೊಂದಿಗೆ ಈ ಪ್ರದೇಶದ ಸಂಪರ್ಕವು ದೇಶದ ಇತರ ಭಾಗಗಳಿಗೆ ತಲುಪಲು ಸಹಕರಿಸುತ್ತದೆ. ಲಾಜಿಸ್ಟಿಕಲ್ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ, ಇದು ದೇಶದ ಆರ್ಥಿಕತೆಯನ್ನು ಹೆಚ್ಚಿಸಲ್ಲಿದ್ದು, ಪ್ರಯಾಣಕ್ಕೆ ಉತ್ತೇಜನ ನೀಡುತ್ತದೆ. ಮೊದಲು ದೆಹಲಿ ಮತ್ತು ಶ್ರೀನಗರವನ್ನು ಸಂಪರ್ಕಿಸಿದ ನಂತರ ಈ ಮಾರ್ಗವು ಅಂತಿಮವಾಗಿ ಉತ್ತರ ಕಾಶ್ಮೀರದ ಬಾರಾಮುಲ್ಲಾವನ್ನು ತಲುಪಬಹುದು ಎಂದು ಹೇಳಲಾಗಿದೆ.
ಮಂಗಳೂರು ರೈಲ್ವೆ ಗಳನ್ನು ನೈರುತ್ಯ ರೈಲ್ವೇ ವ್ಯಾಪ್ತಿಗೆ ಸೇರಿಸುವಂತೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹ
ನಗರ ಭಾಗದಲ್ಲಿ ಕಾರ್ಯನಿರ್ವಹಿಸುವ ರೈಲ್ವೆ ಲೈನ್ಗಳು ಪ್ರಸ್ತುತ ದಕ್ಷಿಣ ರೈಲ್ವೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಬದಲಿಗೆ ಈ ರೈಲ್ವೆ ಲೈನ್ಗಳನ್ನು ನೈರುತ್ಯ ರೈಲ್ವೆ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಪ್ರಸ್ತಾವನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಸಂಸತ್ನ ಚಳಿಗಾಲದ ಅಧಿವೇಶದಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಚೌಟ ಅವರು, ಕರಾವಳಿ ಸೇರಿದಂತೆ ಮಂಗಳೂರು-ಬೆಂಗಳೂರು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆ ವಿಭಾಗದಲ್ಲಿರುವ ಮಂಗಳೂರು ನಗರ ಭಾಗದ ರೈಲ್ವೆ ಲೈನ್ಗಳನ್ನು ನೈಋತ್ಯ ರೈಲ್ವೆ ವ್ಯಾಪ್ತಿಗೆ ತರುವ ಪ್ರಸ್ತಾಪ ರೈಲ್ವೆ ಇಲಾಖೆ ಬಳಿ ಇದೆಯೇ ? ಇದಕ್ಕೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳುವ ಮೂಲಕ ಸಂಸತ್ತಿನಲ್ಲಿ ರೈಲ್ವೆ ಸಚಿವರ ಗಮನಸೆಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Goods Train Derailment: ಹಳಿ ತಪ್ಪಿದ ಗೂಡ್ಸ್ ರೈಲು; ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ