Tuesday, 10th December 2024

IndiGo airlines : ಇಂಡಿಗೊ ಏರ್‌ಲೈನ್ಸ್‌ ಸರ್ವರ್‌ನಲ್ಲಿ ಸಮಸ್ಯೆ; ಪ್ರಯಾಣಿಕರ ಪರದಾಟ

IndiGO Airlines

ಬೆಂಗಳೂರು: ಇಂಡಿಗೊ ಏರ್‌ಲೈನ್ಸ್‌ನ ಸರ್ವರ್‌ನಲ್ಲಿ (IndiGo airlines) ಸಮಸ್ಯೆ ಉಂಟಾದ ಕಾರಣ ವಿಮಾನಗಳ ಕಾರ್ಯಾಚರಣೆಗಳಲ್ಲಿ ಸಮಸ್ಯೆ ಉಂಟಾಯಿತು. ಇದು ದೇಶಾದ್ಯಂತ ವಿಮಾನಗಳ ಹಾರಟದ ಮೇಲೆ ಪರಿಣಾಮ ಬೀರಿತು. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಾಯುವಂತಾಯಿತು.

“ನಾವು ಪ್ರಸ್ತುತ ನಮ್ಮ ನೆಟ್‌ವರ್ಕ್‌ನಾದ್ಯಂತ ಸಮಸ್ಯೆ ಎದುರಿಸುತ್ತಿದ್ದೇವೆ. ಇದು ನಮ್ಮ ವೆಬ್ಸೈಟ್ ಮತ್ತು ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ. ಪರಿಣಾಮವಾಗಿ, ಗ್ರಾಹಕರು ನಿಧಾನಗತಿಯ ಚೆಕ್-ಇನ್‌ಗಳು ಮತ್ತು ವಿಮಾನ ನಿಲ್ದಾಣದಲ್ಲಿ ದೀರ್ಘ ಸರತಿ ಸಾಲುಗಳು ಸೇರಿದಂತೆ ಸಮಸ್ಯೆ ಎದುರಿಸಿದೆ ಎಂಧು ಎಂದು ಏರ್‌ಲೈನ್‌ ಹೇಳಿಕೆ ನೀಡಿದೆ.

ಮಧ್ಯಾಹ್ನ 12 ಗಂಟೆಯಿಂದ ಬುಕಿಂಗ್ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಮಧ್ಯಾಹ್ನ 1.05 ಕ್ಕೆ ಕಾರ್ಯಾಚರಣೆಗಳು ಪುನರಾರಂಭಗೊಂಡವು. ಆದಾಗ್ಯೂ, ವ್ಯವಸ್ಥೆಯು ಆಘ ಕೈ ಕೊಡುತ್ತಲೇ ಇತ್ತು ಮೂಲಗಳು ತಿಳಿಸಿವೆ. ಪರಿಸ್ಥಿತಿ ಪರಿಹರಿಸಲು ಮತ್ತು ಪ್ರಯಾಣಿಕರಿಗೆ ನೆರವಾಗಲು ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ತಮ್ಮ ತಂಡವು ಕೆಲಸ ಮಾಡುತ್ತಿದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: Air India : ತಿರುವನಂತಪುರಂನಿಂದ ಮಸ್ಕತ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊಗೆ

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಮಾನ ನಿಲ್ದಾಣಗಳ ದೃಶ್ಯಗಳ ಪ್ರಕಾರ ಚೆಕ್-ಇನ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸರತಿಯ ಸಾಲು ಕಂಡು ಬಂದಿತ್ತು. ಹಲವಾರು ಜನರು ಟಿಕೆಟ್ ಕಾಯ್ದಿರಿಸಲು ಅಥವಾ ಇತರ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.