ನವದೆಹಲಿ: ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸಮೀಕ್ಷೆಯಲ್ಲಿ ಇಂದೋರ್ ಮತ್ತು ಸೂರತ್ ದೇಶದ ‘ಸ್ವಚ್ಛ ನಗರಗಳು’ ಎಂದು ಆಯ್ಕೆಯಾಗಿವೆ.
ಸತತ 7ನೇ ಬಾರಿಗೆ ಇಂದೋರ್’ಗೆ ದೇಶದ ಸ್ವಚ್ಛ ನಗರಿ ಪಟ್ಟ ದಕ್ಕಿದೆ. ಇನ್ನು ನವೀ ಮುಂಬೈ ಮೂರನೇ ಸ್ಥಾನ ಉಳಿಸಿಕೊಂಡಿದೆ.
ಭಾರತವು ತನ್ನನ್ನು ಸ್ವಚ್ಛ ನಗರವೆಂದು ಘೋಷಿಸುತ್ತದೆ! ಭಾರತದ ಸ್ವಚ್ಛ ನಗರವಾಗಿ ಅಗ್ರಸ್ಥಾನವನ್ನ ಪಡೆದ ಇಂದೋರ್ ಮತ್ತು ಸೂರತ್ ಎರಡಕ್ಕೂ ಅಭಿನಂದನೆಗಳು. ಸ್ವಚ್ಛತೆಯ ಬಗ್ಗೆ ನಿಮ್ಮ ಅಚಲ ಬದ್ಧತೆ ಅಸಾಧಾರಣವಾಗಿದೆ.
‘ಸ್ವಚ್ಛ ಸರ್ವೇಕ್ಷಣ್ ಪ್ರಶಸ್ತಿ 2023’ ರಲ್ಲಿ ‘ಅತ್ಯುತ್ತಮ ಪ್ರದರ್ಶನ ನೀಡಿದ ರಾಜ್ಯಗಳು’ ವಿಭಾಗದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನವನ್ನ ಪಡೆದುಕೊಂಡಿದೆ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ನಂತರದ ಸ್ಥಾನಗಳಲ್ಲಿವೆ.
ವಾರಣಾಸಿ ಅತ್ಯುತ್ತಮ ಮತ್ತು ಸ್ವಚ್ಛವಾದ ಗಂಗಾ ಪಟ್ಟಣವಾಗಿದ್ದು, ಪ್ರಯಾಗ್ ರಾಜ್ ನಂತರದ ಸ್ಥಾನದಲ್ಲಿದೆ. ಮಧ್ಯಪ್ರದೇಶದ ಮೋವ್ ಕಂಟೋನ್ಮೆಂಟ್ ಬೋರ್ಡ್ ಸ್ವಚ್ಛ ಕಂಟೋನ್ಮೆಂಟ್ ಬೋರ್ಡ್ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಪಡೆದಿದೆ.