Sunday, 1st December 2024

Jammu & Kashmir Encounter : ಜಮ್ಮು& ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ, ನುಸುಳುಕೋರನ ಹತ್ಯೆ

Jammu & Kashmir Encounter

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (J&K)ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ(LOC) ಉದ್ದಕ್ಕೂ ಉಗ್ರರ ನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನೆ(Indian army) ಶನಿವಾರ ವಿಫಲಗೊಳಿಸಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಉರಿ ಸೆಕ್ಟರ್‌ನ(Uri Sector) ಕಮಲ್‌ಕೋಟೆ ಪ್ರದೇಶದ ಎಲ್‌ಒಸಿ ಬಳಿ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಸೈನಿಕರು ನುಸುಳುಕೋರರನ್ನು ತಡೆದಿದ್ದರು. ನುಸುಳುಕೋರರು ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ ಒಬ್ಬ ನುಸುಳುಕೋರನ್ನು ಹೊಡೆದುರುಳಿಸಿದೆ. ದುರ್ಗಮ ಪ್ರದೇಶದಲ್ಲಿ ಕಾರ್ಯಚರಣೆ ನಡೆದಿದ್ದರಿಂದ ನುಸುಳುಕೋರನ ಶವ ಇನ್ನೂ ಪತ್ತೆಯಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪದೇ ಪದೇ ಒಳನುಸುವಿಕೆ ಹೆಚ್ಚಾಗುತ್ತಿದ್ದು, ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ (LOC) ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿ ಇಬ್ಬರು ಭಯೋತ್ಪಾದಕರನ್ನು(Terrorist) ಹತ್ಯೆ ಮಾಡಿರುವುದಾಗಿ ಭಾರತೀಯ ಸೇನೆ ಹೇಳಿಕೆ ನೀಡಿದೆ.

ಕುಪ್ವಾರದ ಗುಗಲ್‌ಧಾರ್ ಸೆಕ್ಟರ್‌ನ ಎಲ್‌ಒಸಿ ಬಳಿ ಸೇನಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಸ್ಫೋಟ ಸಂಭವಿಸಿತ್ತು ಇಬ್ಬರು ಸೈನಿಕರು ಗಾಯಗೊಂಡಿದ್ದರು. ಅಕ್ಟೋಬರ್‌ 4ರಂದು ಒಳನುಸುಳುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಪೋಲೀಸ್‌ ಜಂಟಿ ಕಾರ್ಯಾಚರಣೆ ನಡೆಸಿ ಗುಗಲ್ಧಾರ್ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ. ಕಳೆದ ಕೆಲವು ದಿನಗಳಿಂದ ಪದೇ ಪದೇ ದಾಳಿ ಹಾಗೂ ಒಳ ನುಸುಳುವಿಕೆ ನಡೆಯುತ್ತಲೇ ಇದೆ.

ಇದನ್ನೂ ಓದಿ : Terror Attack: ಜಮ್ಮು & ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ನಾಗರಿಕ ಬಲಿ

ಸೆಪ್ಟೆಂಬರ್ 28 ರಂದು, ದಕ್ಷಿಣ ಕಾಶ್ಮೀರದ ದೇವ್ಸರ್ ಕುಲ್ಗಾಮ್ ಜಿಲ್ಲೆಯಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಕೊಲ್ಲಲಾಯಿತು, ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಭದ್ರತಾ ಪಡೆ ಸಿಬ್ಬಂದಿ ಕೂಡ ಗಾಯಗೊಂಡಿದ್ದರು. ಈ ಹಿಂದೆ ಅಕ್ಟೋಬರ್ 14 ರಂದು ಬಾರಾಮುಲ್ಲಾದ ಟಪ್ಪರ್‌ನಲ್ಲಿ ಮೂವರು ಉಗ್ರರನ್ನು ಕೊಂದಿರುವುದಾಗಿ ಸೇನೆ ಮತ್ತು ಪೊಲೀಸರು ಹೇಳಿಕೊಂಡಿದ್ದರು. ಆಗಸ್ಟ್ 29 ರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಕಾರ್ಯಾಚರಣೆಯ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ಡ ಕಾನ್ಸ್‌ಟೇಬಲ್ ಬಶೀರ್ ಅಹ್ಮದ್ ಅವರು ಕೊನೆಯುಸಿರೆಳೆಯುವ ಮೊದಲು ಭಯೋತ್ಪಾದಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಕೂಡ ಗಾಯಗೊಂಡಿದ್ದರು.

ಸೆಪ್ಟೆಂಬರ್‌ 24 ರಂದು ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿದ್ದು, ಸೂಕ್ಷ ಪ್ರದೇಶಗಳಲ್ಲಿ ಅತೀ ಭದ್ರತೆ ಒದಗಿಸಲಾಗಿತ್ತು. ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.