ಮುಂಬೈ: ಇನ್ಫೋ ನಾರಾಯಣ ಮೂರ್ತಿ ಅವರ ’70-ಗಂಟೆಗಳ ಕೆಲಸದ ವಾರ’ ಸಲಹೆಯನ್ನು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಬೆಂಬಲಿಸಿದ್ದಾರೆ.
ಭಾರತದಲ್ಲಿ ಯುವಕರು ವಾರಕ್ಕೆ ಕನಿಷ್ಠ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂಬ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಬೆಂಬಲಿಸಿದ್ದಾರೆ.
ಜೆಎಸ್‌ಡಬ್ಲ್ಯೂ ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್ ಮೂರ್ತಿಯವರ ಹೇಳಿಕೆಯನ್ನು ಮನಃಪೂರ್ವಕವಾಗಿ ಅನುಮೋದಿಸುವುದಾಗಿ ಹೇಳಿದರು. ಐದು ದಿನಗಳ ವಾರದ ಸಂಸ್ಕೃತಿಯು ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಕ್ಕೆ ಅಗತ್ಯವಿಲ್ಲ ಎಂದು ಹೇಳಿದರು.
“ನಮ್ಮ ಪ್ರಧಾನಿ ನರೇಂದ್ರ ಮೋದಿ ಜಿ ಪ್ರತಿದಿನ 14-16 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ನನ್ನ ತಂದೆ ವಾರದಲ್ಲಿ 12-14 ಗಂಟೆಗಳು, 7 ದಿನಗಳು ಕೆಲಸ ಮಾಡುತ್ತಿದ್ದರು. ನಾನು ಪ್ರತಿದಿನ 10-12 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ” ಎಂದು ಜಿಂದಾಲ್ ಹೇಳಿಕೊಂಡಿದ್ದು, “ನಾವು ನಮ್ಮ ಕೆಲಸದಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಉತ್ಸಾಹವನ್ನು ಕಂಡುಕೊಳ್ಳಬೇಕು” ಎಂದರು.