Tuesday, 10th September 2024

ಇನ್​ಗೊ ಎಲೆಕ್ಟ್ರಿಕ್​ನಿಂದ ಇನ್​ಗೊ ಫ್ಲೀ 2.0 ಬೈಕ್​ ಬಿಡುಗಡೆ

ಬೆಂಗಳೂರು: ಮುಂಚೂಣಿ ಮೈಕ್ರೋ ಮೊಬಿಲಿಟಿ ಕಂಪನಿಯಾಗಿರುವ ಇನ್​ಗೊ ಎಲೆಕ್ಟ್ರಿಕ್ ತನ್ನ ಇತ್ತೀಚಿನ ಎಲೆಕ್ಟ್ರಿಕ್ ವಾಹನ ಮಾದರಿಯಾಗಿರುವ ಇನ್​ ಗೊ ಫ್ಲೀ 2.0 ದ್ವಿಚಕ್ರ ವಾಹನವನ್ನು ಅನ್ನು ಬಿಡುಗಡೆ ಮಾಡಿದೆ. ಇನ್ ಗೊ ಫ್ಲೀ 2.0 ವಾಹನಕ್ಕೆ62,000 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ. ದಕ್ಷತಾಶಾಸ್ತ್ರದ ವಿನ್ಯಾಸ ಮತ್ತು ಆರಾಮದಾಯಕ ಪ್ರಯಾಣದ ಮೇಲೆ ಗಮನ ಕೇಂದ್ರೀಕರಿಸಿ ಹೊಸ ದ್ವಿಚಕ್ರ ವಾಹವನ್ನು ವಿನ್ಯಾಸಗೊಳಿಸಲಾಗಿದೆ.

ಇನ್​ಗೊ ಫ್ಲೀ 2.0 ನ ಉನ್ನತ-ಕಾರ್ಯಕ್ಷಮತೆಯ ಅದರ ಉತ್ಕೃಷ್ಟ ದರ್ಜೆಯ ವೈಶಿಷ್ಟ್ಯವಾಗಿದೆ. ಅದೇ ರೀತಿ ಶೂನ್ಯ ನಿರ್ವಹಣೆ ವೆಚ್ಚವನ್ನು ಇದು ಬೇಡುತ್ತದೆ ಹಾಗೂ ಸುಗಮ ಸವಾರಿಯನ್ನು ಗ್ರಾಹಕರಿಗೆ ಖಚಿತಪಡಿಸುತ್ತದೆ. ತನ್ನ ವರ್ಗದಲ್ಲಿ ಅತಿ ಹೆಚ್ಚು ಲೋಡ್ ಹೊರುವ ಸಾಮರ್ಥ್ಯವನ್ನು ಹೊಂದಿರುವ ಇನ್​ಗೊ ಫ್ಲೀನಲ್ಲಿ 25 ಕೆ.ಜಿ ಕ್ಯಾರಿಯರ್​ನಲ್ಲಿ ಮತ್ತು ಫುಟ್ ಬೋರ್ಡ್ ನಲ್ಲಿ 50 ಕೆ.ಜಿ ಸಾಗಿಸಲು ಸಾಧ್ಯವಿದೆ. ಐಒಟಿ (Internet of Things) ಮತ್ತು ಟೆಲಿಮ್ಯಾಟಿಕ್ಸ್ ವೈಶಿಷ್ಟ್ಯಗಳಿಂದಾಗಿ ಸಾಫ್ಟ್ವೇರ್ ಸೂಟ್ ಮೂಲಕ ರಿಯಲ್ ಟೈಮ್​ ಟ್ರ್ಯಾಂಕಿಂಗ್​, ರಿಮೋಟ್ ಲಾಕಿಂಗ್, ಜಿಯೋ-ಫೆನ್ಸಿಂಗ್ ಮತ್ತು ಕಳ್ಳತನ ಎಚ್ಚರಿಕೆಗಳನ್ನು ನೀಡುತ್ತದೆ .ಹೆಚ್ಚುವರಿಯಾಗಿ, ವಾಹನವು ತನ್ನ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಎಲ್ಲಿಯಾದರೂ ಚಾರ್ಜ್ ಮಾಡುವ ಅನುಕೂಲತೆಯನ್ನು ನೀಡುತ್ತದೆ, 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತ್ವರಿತ ಚಾರ್ಜ್ ವ್ಯವಸ್ಥೆ ಇದರಲ್ಲಿದ್ದು, 2 ನಿಮಿಷಗಳಲ್ಲಿ ಸುಲಭ ವಾಗಿ ಸ್ವಾಪ್​ ಮಾಡುವುದಕ್ಕೂ ಸಾಧ್ಯವಿದೆ. ​

ಹೊಸ ವಾಹನದ ಬಗ್ಗೆ ಮಾತನಾಡಿದ ಇನ್​ಗೋ ಎಲೆಕ್ಟ್ರಿಕ್ಸ್​​ನ ಸಿಇಒ ಮತ್ತು ಸಹ-ಸಂಸ್ಥಾಪಕ ನಿಖಿಲ್ ಗೊನ್ಸಾಲ್ವಿಸ್ “ಜನರು ವೇಗವಾಗಿ, ಸುರಕ್ಷಿತವಾಗಿ ಮತ್ತು ತಡೆರಹಿತವಾಗಿ ಪ್ರಯಾಣಿಸಲು ಸಹಾಯ ಮಾಡುವ ಪರಿಣಾಮಕಾರಿ ಮೈಕ್ರೋ-ಮೊಬಿಲಿಟಿ ಪರಿಹಾರವನ್ನು ನೀಡುವ ಉದ್ದೇಶದಿಂದ ಇನ್​ಗೊ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಂಚಾರ ದಟ್ಟಣೆಯು ದೊಡ್ಡ ಸಮಸ್ಯೆಯ ಕೇಂದ್ರ ಬಿಂದುವಾಗಿರುವ ನಗರಗಳಲ್ಲಿ ಪ್ರಯಾಣದ ಮಾದರಿಯನ್ನು ಬದಲಾಯಿಸುವುದು ನಮ್ಮ ದೃಷ್ಟಿಕೋನವಾಗಿದೆ. ನಮ್ಮ ಹೊಸ ಮಾಡೆಲ್​ ಆ ದಿಕ್ಕಿನಲ್ಲಿ ವಿನೂತನ ಹೆಜ್ಜೆಯಾಗಿದೆ. ನಮ್ಮ ಮೊದಲ ಮಾದರಿಗೆ ಅಗಾಧ ಪ್ರತಿಕ್ರಿಯೆಯ ದೊರಕಿದ ಹಿನ್ನೆಲೆಯಲ್ಲಿ ಇನ್​ಗೊ ಫ್ಲೀ 2.0 ಅನ್ನು ಪರಿಚಯಿಸಲು ನಾವು ಉತ್ಸುಕರಾಗಿದ್ದೇವೆ. ಇದು ಸವಾರನಿಗೆ ಆರಾಮದಾಯಕದ ಜತೆ ಅತ್ಯುತ್ತಮ ಸವಾರಿ ಅನುಭವವನ್ನು ನೀಡುತ್ತದೆ. ಇನ್​ಗೊ ಫ್ಲೀ 2.0 ಸಾರಿಗೆ ಮಾದರಿಯೊಂದನ್ನು ನೀಡುವ ಜತೆಗೆ ಸ್ಥಿರತೆ ಮತ್ತು ಸರಳವಾಗಿರುವ ಪ್ರಯಾಣದ ಆದ್ಯತೆ ನೀಡುವ ಅನುಭವವನ್ನು ಒದಗಿಸುತ್ತದೆ ಎಂದು ಹೇಳಿದರು.

ವಾಹನದ ವೈಶಿಷ್ಟ್ಯಗಳು ಇವು

⦁ ವ್ಯಾಪ್ತಿ: 50 ಕಿ.ಮೀ
⦁ ಬ್ಯಾಟರಿ: 1kW, 48V, 23.2Ah
⦁ ಪೀಕ್ ಟಾರ್ಕ್: 65 ಎನ್ಎಂ
⦁ ಸಸ್ಪೆಂಷನ್: ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್, ಹಿಂಭಾಗದಲ್ಲಿ ಹೆವಿ ಡ್ಯೂಟಿ ಶಾಕ್ ಗಳು
⦁ ಅಳತೆಗಳು: 1670 x 685 x 1200 ಮಿಮೀ
⦁ ಗರಿಷ್ಠ ವೇಗ: ಗಂಟೆಗೆ 25 ಕಿ.ಮೀ.
⦁ ಚಾರ್ಜರ್ & ಸಮಯ: 54.6V / 6A – 4 ಗಂಟೆಗಳು
⦁ ಚಕ್ರ ಗಾತ್ರ: 10″x3.00″ (ಮುಂಭಾಗ ಮತ್ತು ಹಿಂಭಾಗ)
⦁ ಮ್ಯಾಕ್ಸ್ ಪೇಲೋಡ್: ಫುಟ್ ಬೋರ್ಡ್ ನಲ್ಲಿ 50 ಕೆ.ಜಿ, ಕ್ಯಾರಿಯರ್​ನಲ್ಲಿ 25 ಕೆ.ಜಿ
⦁ ಗ್ರೌಂಡ್ ಕ್ಲಿಯರೆನ್ಸ್: 149 ಎಂಎಂ
⦁ ಮೋಟರ್ & ಕಂಟ್ರೋಲರ್: 250W BLDC ಹಬ್ ಮೋಟರ್​
ಒಟ್ಟು ತೂಕ: 55 ಕೆಜಿ

ಇತರ ಕೆಲವು ಗಮನಾರ್ಹ ವೈಶಿಷ್ಟ್ಯಗಳಲ್ಲಿ ಸವಾರರು ತಮ್ಮ ಸವಾರಿ ಖುಷಿಯನ್ನು ಹಂಚಿಕೊಳ್ಳಲು ಎರಡು ಸೀಟ್​ಗಳ ಆಯ್ಕೆಯೂ ಸೇರಿದೆ. ಇನ್​ಗೊ ಫ್ಲೀ 2.0 10-ಇಂಚಿನ ಎಲ್ಸ್​ಡಿಯನ್ನು ನೀಡಿದ್ದು, ಇದರಲ್ಲಿ ಬ್ಯಾಟರಿ ಗೇಜ್ ಇದೆ. ಇದು ಪ್ರಯಾಣದ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸು ತ್ತದೆ.

ಸುಧಾರಿತ ಸಸ್ಪೆಂಷನ್ ವ್ಯವಸ್ಥೆಯು ವರ್ಧಿತ ಸವಾರಿ ಗುಣಮಟ್ಟ ಮತ್ತು ನಿರ್ವಹಣೆಯನ್ನು ಖಚಿತಪಡಿಸುತ್ತದೆ. 110 ಎಂಎಂ ಬ್ರೇಕ್ ಡಿಸ್ಕ್​ ಹೊಂದಿರುವ ಹೊಂದಿರುವ ಅಗಲವಾದ ಮುಂಭಾಗದ ಚಕ್ರಗಳು ಉತ್ತಮ ಸುರಕ್ಷತೆ ಒದಗಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಟ್ಯೂಬ್ ಲೆಸ್ ಟೈರ್ ಗಳಿಳು ವಾಹನದ ಒಟ್ಟಾರೆ ಬಾಳಿಕೆ ದಕ್ಷತೆಯನ್ನು ಹೆಚ್ಚಿಸುತ್ತದೆ. 350 ಎಂಎಂ ಅಗಲದ ಅಲ್ಟ್ರಾ-ಕಂಫರ್ಟ್ ಸೀಟ್ ಅನ್ನು ದೀರ್ಘ ಸವಾರಿಗಳಿಗಾಗಿ ವಿನ್ಯಾಸ ಗೊಳಿಸಲಾಗಿದೆ. ಒಟ್ಟಿನಲ್ಲಿ ಸವಾರರ ಆರಾಮಕ್ಕೆ ಆದ್ಯತೆ ನೀಡಲಾಗಿದೆ.

ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಗಾಗಿ 24x7x365 ದಿನಗಳ ಸಂಪರ್ಕಿತ ವಾಹನ ಪ್ಲಾಟ್ ಫಾರ್ಮ್ ಅನ್ನು ಈಗ ಎಲ್ಲಾ ವೇರಿಯೆಂಟ್​ಗಳಲ್ಲಿ ಸ್ಟ್ಯಾಂಡರ್ಡ್​ ಆಗಿ ನೀಡಲಾಗಿದೆ. ಇದು ಭದ್ರತೆಯನ್ನು ಹೆಚ್ಚಿಸುತ್ತದೆ. ಇನ್​ಗೊ ಫ್ಲೈ 2.0 ಹೊಸ ಸ್ಟೈಲಿಂಗ್ ಮತ್ತು ಗ್ರಾಫಿಕ್ಸ್ ಅನ್ನು ಸಹ ನೀಡಿದೆ, ಇದು ತಾಜಾ ಸೌಂದರ್ಯವನ್ನು ನೀಡುತ್ತದೆ. ಬ್ಯಾಟರಿ ಲೆವೆಲ್ ಇಂಡಿಕೇಷನ್ ಹೊಂದಿರುವ ಚಾರ್ಜರ್​ . ಆಟೋ-ಹೋಲ್ಡ್ ಬ್ಯಾಟರಿ ಹುಡ್ ವಾಹನವನ್ನು ಬಳಕೆದಾರ ಸ್ನೇಹಿ ಮತ್ತು ವಾಸ್ತವಕ್ಕೆ ಹತ್ತಿರವಾಗಿಸಿದೆ

ಇನ್​ಗೊ ಫ್ಲೀ 2.0 ಡಿಸೆಂಬರ್ 1ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಆಸಕ್ತ ಖರೀದಿದಾರರು ಹೆಚ್ಚಿನ ಮಾಹಿತಿಗಾಗಿ https://ingoelectric. com/ ಭೇಟಿ ನೀಡಬಹುದು ಅಥವಾ +91 7019908703 ಗೆ ಕರೆ ಮಾಡಬಹುದು

Leave a Reply

Your email address will not be published. Required fields are marked *