ತನ್ನ 35 ವರ್ಷಗಳ ಪ್ರಯಾಣದುದ್ದಕ್ಕೂ ಸೇನೆಯ ಆತ್ಮನಿರ್ಭರ ಸಾಧಿಸುವ ಪ್ರಯತ್ನಗಳ ಧ್ವಜಧಾರಿಯಾಗಿತ್ತು. ಇದು ರಷ್ಯಾ ನಿರ್ಮಿತ ಸಿಂಧುಘೋಷ್ ವರ್ಗದ ಜಲಾಂತರ್ಗಾಮಿ ನೌಕೆಯಾಗಿದ್ದು ಅದನ್ನು ದೇಶೀಕರಣಗೊಳಿಸ ಲಾಗಿತ್ತು. ಸ್ಥಳೀಯ ಸೋನಾರ್ USHUS ಬಳಕೆ, ರುಕ್ಮಣಿಯಂತಹ ಸ್ಥಳೀಯ ಉಪಗ್ರಹ ಸಂವಹನ ವ್ಯವಸ್ಥೆಗಳು, ಸ್ಥಳೀಯ ಟಾರ್ಪಿಡೊ ಫೈರ್ ಕಂಟ್ರೋಲ್ ಸಿಸ್ಟಮ್‌ನ ಕಾರ್ಯಾಚರಣೆ ಮುಂತಾದವು ʼಸಿಂಧುಧ್ವಜ್ʼ ನಲ್ಲೇ ಮೊದಲು ಬಳಕೆಯಾಗಿದ್ದವು.
ಹೊಸ ಅನ್ವೇಷಣೆಯ ಹೆಸರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಸಿಎನ್‌ಎಸ್ ರೋಲಿಂಗ್ ಟ್ರೋಫಿಯನ್ನು ಪಡೆದ ಏಕೈಕ ಜಲಾಂತರ್ಗಾಮಿ ನೌಕೆ ಇದಾಗಿದೆ. ಹೀಗೆ ನೌಕಾಸೇನೆಗೆ ವಿಶಿಷ್ಟ ಕೊಡುಗೆ ನೀಡಿದ ʼಐಎನ್‌ಎಸ್ ಸಿಂಧುಧ್ವಜ್ʼ ಗೆ ವಿಶಾಖಪಟ್ಟಣದಲ್ಲಿ ಗೌರವದ ವಿದಾಯ ಹೇಳಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪೂರ್ವ ನೌಕಾ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ವೈಸ್ ಅಡ್ಮಿರಲ್ ಬಿಸ್ವಜಿತ್ ದಾಸ್‌ಗುಪ್ತಾ ಭಾಗವಹಿಸಿದ್ದರು. ಕಮೊಡೊರ್ ಎಸ್ಪಿ ಸಿಂಗ್ (ನಿವೃತ್ತ), ಕಮಿಷನಿಂಗ್ ಸಿಒ ಮತ್ತು 26 ಕಮಿಷನಿಂಗ್ ಸಿಬ್ಬಂದಿ ಪರಿಣತರು ಸೇರಿದಂತೆ 15 ಮಾಜಿ ಕಮಾಂಡಿಂಗ್ ಅಧಿಕಾರಿಗಳು ಭಾಗವಹಿಸಿದ್ದರು.