Friday, 13th December 2024

ಇಂಟೆಲ್: 200 ಉದ್ಯೋಗಿಗಳ ವಜಾ..?

ನವದೆಹಲಿ: ಸುಮಾರು 200 ಉದ್ಯೋಗಿಗಳನ್ನು  ಶೀಘ್ರದಲ್ಲೇ ವಜಾಗೊಳಿಸುವುದಾಗಿ ಚಿಪ್​ ತಯಾರಿಕಾ ಕಂಪನಿ ಇಂಟೆಲ್ ತಿಳಿಸಿರುವುದಾಗಿ ವರದಿಯಾಗಿದೆ.

ಅಮೆರಿಕದ ಕಂಪ್ಯೂಟರ್ ನಿಯತಕಾಲಿಕೆ ‘ಸಿಆರ್​ಎನ್’ ವರದಿಯ ಪ್ರಕಾರ, ಜನವರಿ 31ರಿಂದ ಇಂಟೆಲ್ ವಜಾ ಪ್ರಕ್ರಿಯೆ ಆರಂಭಿಸ ಲಿದೆ. ಮಾರಾಟದಲ್ಲಿ ಕುಸಿತ ಕಂಡು ಬಂದಿರುವುದೇ ಉದ್ಯೋಗಿಗಳ ವಜಾಕ್ಕೆ ಕಾರಣ ಎನ್ನಲಾಗಿದೆ.

ವೆಚ್ಚ ಕಡಿತ ಯೋಜನೆಯ ಅಡಿಯಲ್ಲಿ ಕನಿಷ್ಠ 201 ಮಂದಿಯನ್ನು ಇಂಟೆಲ್ ವಜಾ ಗೊಳಿಸಲಿದೆ. ಇಂಟೆಲ್​ನ ಕ್ಯಾಲಿಫೋರ್ನಿ ಯಾದ ಫಾಲ್ಸೊಮ್​ ಕಚೇರಿಯಿಂದ 111 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ. 90 ಮಂದಿ ಉದ್ಯೋಗಿಗಳನ್ನು ಸಾಂತಾ ಕ್ಲಾರಾ ಪ್ರದೇಶದಲ್ಲಿರುವ ಇಂಟೆಲ್ ಪ್ರಧಾನ ಕಚೇರಿಗೆ ವರ್ಗಾಯಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಜಾಗತಿಕವಾಗಿ ಇಂಟೆಲ್​ನ ಸಾವಿರಾರು ಕಾರ್ಖಾನೆ ಕೆಲಸಗಾರರಿಗೆ ಮೂರು ತಿಂಗಳ ವೇತನ ರಹಿತ ರಜೆ ಆಫರ್ ನೀಡಲಾಗಿದೆ ಎಂದು ವರದಿ ಮಾಡಿದೆ. ಉತ್ಪಾದನಾ ಕ್ಷೇತ್ರದ ಪ್ರತಿಭೆ ಗಳನ್ನು ಉಳಿಸಿಕೊಳ್ಳುವುದು ದೀರ್ಘಾವಧಿಯ ಬೆಳವಣಿಗೆ ದೃಷ್ಟಿಯಿಂದ ನಮಗೆ ಬಹು ಮುಖ್ಯವಾಗಿದೆ. ಐರ್ಲೆಂಡ್​ನಲ್ಲಿ ಇಂಟೆಲ್​ ಕಾರ್ಖಾನೆ ಕೆಲಸಗಾರರಿಗೆ ಮೂರು ತಿಂಗಳ ವೇತನರಹಿತ ರಜೆ ಆಫರ್ ನೀಡಿತ್ತು ಎಂದು ವರದಿ ಮಾಡಿತ್ತು.