Friday, 13th December 2024

ನ.30ರವರೆಗೆ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ವಿಮಾನ ಹಾರಾಟ ಸ್ಥಗಿತ

ನವದೆಹಲಿ: ಕೋವಿಡ್- 19 ಸಾಂಕ್ರಾಮಿಕ ರೋಗಗಳ ನಡುವೆ, ನವೆಂಬರ್ 30ರ ವರೆಗೆ ಭಾರತದಿಂದ ನಿಗದಿತ ಅಂತಾ ರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಯನ್ನು ಮತ್ತಷ್ಟು ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ನಾಗರಿಕ ವಿಮಾನ ಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ತಿಳಿಸಿದೆ.

‘ಭಾರತದಿಂದ ವಿದೇಶಕ್ಕೆ ಹೋಗುವ ಹೋಗುವ/ಬರುವ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳ ಮೇಲಿನ ಅಮಾ ನತು ನ.30ರ ವರೆಗೆ ವಿಸ್ತರಣೆ’ ಎಂದು ವಿಮಾನಯಾನ ನಿಯಂತ್ರಕರು ತಿಳಿಸಿದ್ದಾರೆ.

ಆದಾಗ್ಯೂ, ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನಗಳು ಮತ್ತು ಸರ್ಕಾರ ಅನುಮೋದಿಸಿದ ಪ್ರಯಾಣಿಕರ ವಿಮಾನಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ.