Saturday, 14th December 2024

ಉಗ್ರ ಸಂಘಟನೆಗೆ ಗೌಪ್ಯ ಮಾಹಿತಿ ಸೋರಿಕೆ: ಐಪಿಎಸ್ ಅಧಿಕಾರಿ ಎನ್‌ಐಎ ವಶಕ್ಕೆ

ನವದೆಹಲಿ : ಉಗ್ರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಗೌಪ್ಯ ಮಾಹಿತಿ ಗಳನ್ನ ಸೋರಿಕೆ ಮಾಡಿದ ಆರೋಪದ ಮೇಲೆ ತನ್ನ ಮಾಜಿ ಪೊಲೀಸ್ ವರಿಷ್ಠಾಧಿಕಾರಿ, ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿಯನ್ನ ಶುಕ್ರವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.

ಭಯೋತ್ಪಾದಕ ಗುಂಪಿನ ಗ್ರೌಂಡ್‌ ವರ್ಕರ್‌ಗೆ ದಾಖಲೆಗಳನ್ನ ಹಸ್ತಾಂತ ರಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಸಂಸ್ಥೆಯ ಅಧಿಕೃತ ವಕ್ತಾರ ತಿಳಿಸಿ ದ್ದಾರೆ. 2011ರ ಐಪಿಎಸ್ ಬ್ಯಾಚ್‌ನಲ್ಲಿ ಬಡ್ತಿ ಪಡೆದ ಪೊಲೀಸ್ ಅಧಿಕಾರಿ ಯನ್ನ ಕಳೆದ ವರ್ಷ ನವೆಂಬರ್ 6 ರಂದು ಎನ್‌ಐಎ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಯೋಜನೆ ಮತ್ತು ಕಾರ್ಯ ಗತಗೊಳಿಸಲು ಸಹಾಯ ಮಾಡಲು ನಿಷೇಧಿತ ಲಷ್ಕರ್-ಎ-ತೊಯ್ಬಾದ ಗ್ರೌಂಡ್‌ ವರ್ಕ್ ಜಾಲದ ಪ್ರಸರಣಕ್ಕೆ ಈ ಪ್ರಕರಣವು ಸಂಬಂಧಿಸಿದೆ. ತನಿಖೆಯ ಸಂದರ್ಭದಲ್ಲಿ, ಶಿಮ್ಲಾದಲ್ಲಿ ನಿಯೋಜನೆ ಗೊಂಡಿದ್ದ ಎಡಿ ನೇಗಿ, ಐಪಿಎಸ್ ಪಾತ್ರವನ್ನು ಪರಿಶೀಲಿಸಲಾಗಿದೆ ಮತ್ತು ಅವರ ಮನೆಯನ್ನು ಶೋಧಿಸಲಾಗಿದೆ.

ಪ್ರಕರಣದಲ್ಲಿ ಲಷ್ಕರ್-ಎ-ತೊಯ್ಬಾದ ಓಜಿಡಬ್ಲ್ಯೂ ಆಗಿರುವ ಇನ್ನೊಬ್ಬ ಆರೋಪಿಗೆ ಎಡಿ ನೇಗಿಯಿಂದ ಎನ್‌ಐಎಯ ಅಧಿಕೃತ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿರುವುದು ಕಂಡುಬಂದಿದೆ.