Thursday, 3rd October 2024

Iran Attacks Israel : ಇರಾನ್‌ ದಾಳಿ ಮುಗಿದಿದೆ, ಬಾಂಬ್‌ ಶೆಲ್ಟರ್‌ನಿಂದ ಹೊರಬನ್ನಿ ಎಂದು ಪ್ರಜೆಗಳಿಗೆ ಕರೆ ಕೊಟ್ಟ ಇಸ್ರೇಲ್‌

Iran Attacks Israel

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ತೀವ್ರಗೊಂಡಿದ್ದು ಇರಾನ್ ಮಂಗಳವಾರ ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದಲ್ಲಿ ಕ್ಷಿಪಣಿ ದಾಳಿ (Iran Attacks Israel) ಪ್ರಾರಂಭಿಸಿದೆ. ಕೆಲವು ವರದಿಗಳು 400 ಕ್ಷಿಪಣಿಗಳ ದಾಳಿ ಮಾಡಿದೆ ಎಂದು ಹೇಳಿವೆ. ಉಗ್ರಗಾಮಿ ಸಂಘಟನೆಯ ಕಮಾಂಡರ್ ಹಸನ್ ನಸ್ರಲ್ಲಾ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ಉನ್ನತ ಅಧಿಕಾರಿ ದಾಳಿಯಲ್ಲಿ ಮೃತಪಟ್ಟ ಕೆಲವೇ ದಿನಗಳ ನಂತರ ಈ ದಾಳಿ ನಡೆದಿದೆ.

ಇಸ್ರೇ ಲ್‌ ವಿದೇಶಾಂಗ ಸಚಿವಾಲಯವು ರಾತ್ರಿ 10.08 ಕ್ಕೆ ಮಾಹಿತಿ ನೀಡಿದ್ದು, ಇರಾನ್‌ ಕ್ಷಿಪಣಿಗಳನ್ನು “ಸ್ವಲ್ಪ ಸಮಯದ ಹಿಂದೆ” ಹಾರಿ ಬಂದಿದ್ದವು ಎಂದ ಹೇಳಿದೆ. ಒಂದು ಗಂಟೆಯ ನಂತರ ರಾತ್ರಿ 11.10 ರ ಸುಮಾರಿಗೆ, ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಇರಾನ್‌ನಿಂದ ” ಸದ್ಯಕ್ಕೆ” ಯಾವುದೇ ಬೆದರಿಕೆ ಇಲ್ಲ ಮತ್ತು ನಾಗರಿಕರು ಬಾಂಬ್ ಆಶ್ರಯಗಳನ್ನು ತೊರೆಯಬಹುದು ಎಂದು ಹೇಳಿದೆ.

ಈ ದಾಳಿಯನ್ನು ದೃಢಪಡಿಸಿದ ಇರಾನ್‌ ರೆವಲ್ಯೂಷನರಿ ಗಾರ್ಡ್ಸ್, ನಸ್ರಲ್ಲಾ, ಹಮಾಸ್ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಮತ್ತು ಅದರ ಹಿರಿಯ ಕಮಾಂಡರ್ ಅಬ್ಬಾಸ್ ನಿಲ್ಫೊರೌಶಾನ್ ಅವರ ಹತ್ಯೆಗೆ ಪ್ರತಿಕ್ರಿಯೆಯಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ಇಸ್ರೇಲ್ ವಿರುದ್ಧ “ದಮನಕಾರಿ ದಾಳಿಗಳನ್ನು” ನಡೆಸುವುದಾಗಿ ರೆವಲ್ಯೂಷನರಿ ಗಾರ್ಡ್ಸ್ ಬೆದರಿಕೆ ಹಾಕಿದೆ. “ಝಿಯೋನಿಸ್ಟ್ ಆಡಳಿತವು ಇರಾನಿನ ಕಾರ್ಯಾಚರಣೆಗಳಿಗೆ ಪ್ರತಿಕ್ರಿಯಿಸಿದರೆ, ಅದು ಕ್ರೂರ ದಾಳಿಗಳನ್ನು ಎದುರಿಸಬೇಕಾಗುತ್ತದೆ” ಎಂದು ಇರಾನಿನ ಸುದ್ದಿ ಸಂಸ್ಥೆ ಫಾರ್ಸ್‌ಗೆ ತಿಳಿಸಿದೆ.

ಇದನ್ನೂ ಓದಿ: Iran Attacks Israel : ಇರಾನ್‌ ಕ್ಷಿಪಣಿಗಳನ್ನು ಹೊಡೆದುರಳಿಸಿದ ಇಸ್ರೇಲ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌, ವಿಡಿಯೊ ಇದೆ

ದಾಳಿಗೆ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ಪ್ರತಿಜ್ಞೆ ಮಾಡಿದೆ. ಐಡಿಎಫ್ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ದೇಶವು ತನ್ನ ಆಯ್ಕೆಯ ಸಮಯದಲ್ಲಿ ಮತ್ತು ಸ್ಥಳದಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ಹೇಳಿದರು. ಈ ದಾಳಿಯು ಪರಿಣಾಮಗಳನ್ನು ಬೀರುತ್ತದೆ. ನಾವು ಯೋಜನೆಗಳನ್ನು ಹೊಂದಿದ್ದೇವೆ/ ನಾವು ನಿರ್ಧರಿಸುವ ಸ್ಥಳ ಮತ್ತು ಸಮಯದಲ್ಲಿ ನಾವು ಕಾರ್ಯಾಚರಣೆ ನಡೆಸುತ್ತೇವೆ ಎಂದು ಅವರು ಹೇಳಿದಾರೆ.