Monday, 9th December 2024

IRCTC  website ಡೌನ್‌: ಇ-ಟಿಕೆಟ್ ಸೇವೆ ಲಭ್ಯವಿಲ್ಲ

ನವದೆಹಲಿ: ರೈಲ್ವೆ ಟಿಕೆಟ್‌ (railway ticket) ಬುಕಿಂಗ್‌ ಜಾಲತಾಣ IRCTC  website ಮಂಗಳವಾರ ಬೆಳಗ್ಗಿನಿಂದ ಸಂಪೂರ್ಣ ಡೌನ್‌ ಆಗಿದೆ. ವೆಬ್‌ಸೈಟ್‌ ತೆರೆದುಕೊಳ್ಳುತ್ತಿಲ್ಲ ಹಾಗೂ ಆನ್‌ಲೈನ್ ಬುಕಿಂಗ್ (online booking) ಸಾಧ್ಯವಾಗುತ್ತಿಲ್ಲ ಎಂದು ಗ್ರಾಹಕರು ಟ್ವಿಟ್ಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ಬುಕ್ಕಿಂಗ್‌ ಪೀಕ್ ಸಮಯದಲ್ಲಿ IRCTC ಸರ್ವರ್ ಡೌನ್ ಆಗಿದ್ದು, ಗ್ರಾಹಕರು ವೆಬ್‌ನಲ್ಲಿ ಮತ್ತು ಅಪ್ಲಿಕೇಶನ್‌ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ. IRCTC ವೆಬ್‌ಸೈಟ್‌ ನೀಡಿರುವ ಹೇಳಿಕೆಯಲ್ಲಿ, ʼʼತಾಂತ್ರಿಕ ಕಾರಣ ಗಳಿಂದ ಟಿಕೆಟ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ನಮ್ಮ ತಾಂತ್ರಿಕ ತಂಡವು ಸಮಸ್ಯೆಯನ್ನು ಪರಿಹರಿಸು ತ್ತಿದೆ. ಸರಿಪಡಿ ಸಿದ ತಕ್ಷಣ ತಿಳಿಸುತ್ತೇವೆ” ಎಂದಿದೆ.

ಚೀನಾ ಸಂಚಿಗೆ ಭಾರತದ ತಿರುಗೇಟು Read this

http://vishwavani.news/ankanagalu/china_india/

IRCTC ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿದರೆ ಈ ಸಂದೇಶ ಕಾಣಿಸಿಕೊಳ್ಳುತ್ತದೆ: “ನಿರ್ವಹಣೆ ಚಟುವಟಿಕೆಯಿಂದಾಗಿ ಇ-ಟಿಕೆಟ್ ಸೇವೆ ಲಭ್ಯವಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ.ʼʼ

ʼʼನಿಮ್ಮ ಟಿಕೆಟ್‌ಗಳ ರದ್ದತಿ ಅಥವಾ TDR ಫೈಲ್‌ ಮಾಡಲು ಈ ಮುಂದಿನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ: 14646,0755-6610661 & 0755-4090600 ಅಥವಾ etickets@irctc.co.inಗೆ ಇಮೇಲ್ ಮಾಡಿ.ʼʼ

ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಪ್ರಯತ್ನಿಸುತ್ತಿರುವವರು ತಾತ್ಕಾಲಿಕವಾಗಿ ಅಮೆಜಾನ್, ಮೇಕ್‌ಮೈಟ್ರಿಪ್ ಮತ್ತಿತರ B2C ಪ್ಲೇಯರ್‌ಗಳನ್ನು ಬಳಸಬಹುದು ಎಂದು ಮಾಹಿತಿ ನೀಡಿದೆ.