Saturday, 14th December 2024

ಐಸಿಎಸ್‌ ಸಂಪರ್ಕ ಹಿನ್ನೆಲೆ: ಐದು ಮಂದಿ ಎನ್‌ಐಎ ವಶಕ್ಕೆ

ನವದೆಹಲಿ : ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯು ಕರ್ನಾಟಕ, ದೆಹಲಿ, ಕೇರಳದ 10 ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿ, ಐದು ಮಂದಿಯನ್ನು ವಶಕ್ಕೆ ಪಡೆದುಕೊಂಡಿದೆ.

ಎನ್ ಐಎ ತಂಡ ಬೆಂಗಳೂರಿನಲ್ಲಿ ಎರಡು ಕಡೆ, ಕೇರಳದ ಕೊಚ್ಚಿ ಮತ್ತು ಕುನೂರು ಗಳಲ್ಲಿ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಎನ್ ಐಎ ತಂಡ ಏಕಕಾಲಕ್ಕೆ ಮೂರು ರಾಜ್ಯಗಳ 10 ಸ್ಥಳಗಳ ಮೇಲೆ ದಾಳಿ ನಡೆಸಿದೆ.