Wednesday, 11th December 2024

ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ ನಿಷೇಧ

ಲಕ್ನೋ: ಇಸ್ಲಾಂನಲ್ಲಿ ವಿವಾಹಪೂರ್ವ ಲೈಂಗಿಕತೆ, ಚುಂಬನ, ಸ್ಪರ್ಶ ಹಾಗೂ ದಿಟ್ಟಿಸುವಿಕೆಗೆ ನಿಷೇಧ ಇದೆ ಎಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ.

ಈ ಮೂಲಕ ಮುಸ್ಲಿಂ ಜೋಡಿಯ ಲಿವಿಂಗ್ ಟುಗೆದರ್ ವಿರುದ್ಧ ಪರೋಕ್ಷವಾಗಿ ತೀರ್ಪು ನೀಡಿದೆ.

ಲಿವ್ ಇನ್ ಸಂಬಂಧದಲ್ಲಿರುವ ಅಂತರ್ಧರ್ಮೀಯ ಜೋಡಿಯೊಂದು, ತಮಗೆ ಯುವತಿಯ ಕುಟುಂಬದಿಂದ ಹಾಗೂ ಪೊಲೀಸರಿಂದ ಕಿರುಕುಳ ವಾಗುತ್ತಿದೆ. ಹೀಗಾಗಿ ರಕ್ಷಣೆ ನೀಡಿ ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಇದನ್ನು ವಜಾಗೊಳಿಸಿದ ಕೋರ್ಟು, ಈ ಮೇಲಿನ ಅಭಿಪ್ರಾಯ ಹೇಳಿದೆ. ಈ ಮೂಲಕ ಲಿವ್ ಇನ್ ಸಂಬಂಧಕ್ಕೆ ಅಸಮ್ಮತಿ ವ್ಯಕ್ತಪಡಿಸಿದೆ.

ಮದುವೆಗೆ ಮುನ್ನ ಯಾವುದೇ ಲೈಂಗಿಕ, ಕಾಮಪ್ರಚೋದಕ, ಪ್ರೀತಿಯಿಂದ ಚುಂಬಿಸುವುದು, ಸ್ಪರ್ಶಿಸುವುದು, ನೋಡುವುದು ಇತ್ಯಾದಿಗಳನ್ನು ಇಸ್ಲಾಂನಲ್ಲಿ ನಿಷೇಧಿಸಲಾಗಿದೆ ಎಂದು ಹೇಳಿದೆ. ಗಂಡ ಮತ್ತು ಹೆಂಡತಿಯ ನಡುವಿನ ಲೈಂಗಿಕ ಸಂಭೋಗವನ್ನು ಹೊರತುಪಡಿಸಿ ಯಾವುದೇ ಲೈಂಗಿಕ ಸಂಭೋಗ ಝಿನಾ ಎಂದು ವ್ಯಾಖ್ಯಾನಿಸಲಾಗಿದೆ.

ಮಹಿಳೆಯ ತಾಯಿ ತಮ್ಮ ಲಿವ್-ಇನ್ ಸಂಬಂಧದಿಂದ ಅತೃಪ್ತರಾಗಿದ್ದಾರೆ ಮತ್ತು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಆರೋಪಿಸಿ ಅಂತರ್ಧರ್ಮೀಯ ದಂಪತಿಗಳು ಸಲ್ಲಿಸಿದ ರಕ್ಷಣೆ ಅರ್ಜಿಯನ್ನು ವಿಭಾಗೀಯ ಪೀಠ ವಿಚಾರಣೆ ನಡೆಸಿತು.