Friday, 13th December 2024

ISRO: ಇಸ್ರೋದ ಮಾನವ ಸಹಿತ ಗಗನ ಯಾನಕ್ಕೆ ಇನ್ನಷ್ಟು ಬಲ – CE20 ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಡಿ.12ರ ಗುರುವಾರದಂದು ಮಹತ್ತರವಾದ ಸಾಧನೆಯೊಂದನ್ನು ಮಾಡಿದೆ. ತನ್ನ ಪ್ರೊಪಲ್ಷನ್ ತಂತ್ರಜ್ಞಾನದಲ್ಲಿ ಸಿಇ20 ಕ್ರಯೋಜೆನಿಕ್ ಯಂತ್ರವು (CE20 cryogenic engine) ಮಹತ್ವದ ಸಮುದ್ರ ಮಟ್ಟದ ಪರೀಕ್ಷೆಯಲ್ಲಿ ಸಫಲತೆಯನ್ನು ಸಾಧಿಸಿದೆ. ಆ ಮೂಲಕ ಇಸ್ರೋದ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗೆ ಆನೆ ಬಲ ಬಂದಂತಾಗಿದೆ.

ಈ ಕ್ರಯೋಜನಿಕ್ ಎಂಜಿನ್ ಪರೀಕ್ಷೆಯನ್ನು ನ.29ರಂದು ತಮಿಳುನಾಡಿನ (Tamil Nadu) ಮಹೇಂದ್ರಗಿರಿಯಲ್ಲಿರುವ (Mahendragiri) ಇಸ್ರೋ ಪ್ರೊಪಲ್ಷನ್ ಕಾಂಪ್ಲೆಕ್ಸ್ ನಲ್ಲಿ (ISRO Propulsion Complex) ಈ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪರಿಕ್ಷೆಯಲ್ಲಿ, ಬಹಳ ಮಹತ್ವದ್ದಾಗಿದ್ದ ಕ್ರಯೋಜನಿಕ್ ಎಂಜಿನ್‌ನ ರಿಸ್ಟಾರ್ಟ್ ಸಾಮರ್ಥ್ಯವನ್ನು ಯಶಸ್ವಿಯಾಗಿ ಪರಿಕ್ಷಿಸಲಾಯಿತು. ಇದು ಇಸ್ರೋದ ಭವಿಷ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಗಗನಯಾನದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಇಸ್ರೋದ ಪ್ರಥಮ ಮಾನವ ಸಹಿತ ಗಗನ ನೌಕೆ ಉಡಾಯನದ ಕನಸಿಗೆ ಈ ಸುಧಾರಿತ ಕ್ರಯೋಜನಿಕ್ ಎಂಜಿನ್ ಪರೀಕ್ಷೆ ಇನ್ನಷ್ಟು ಬಲ ತುಂಬಿದ್ದು, ಲಾಂಚ್ ವೆಹಿಕಲ್ ಮಾರ್ಕ್ -3 (LVM-3)ಗೆ ಈ ಇಂಜಿನ್ ಬಲ ತುಂಬಲಿದೆ. ರಾಕೆಟ್‌ನ ಇಂಧನ ನಿಯಂತ್ರಣ ಪ್ರದೇಶದ ಪ್ರಮಾಣ 100ನ್ನು ಸಾಧಿಸುವುದರೊಂದಿಗೆ ಮಹತ್ವದ ಮೈಲುಗಲ್ಲನ್ನು ಇಸ್ರೋ ಸಾಧಿಸಿದಂತಾಗಿದೆ.

ಸಿಇ20 ಕ್ರಯೋಜನಿಕ್ ಇಂಜಿನ್ ದೇಶಿಯವಾಗಿ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ ಮೂಲಕ ಅಭಿವೃದ್ಧಿಗೊಳಿಸಲಾಗಿದ್ದು, ಇದೀಗ ಈ ವ್ಯವಸ್ಥೆಯು 19 ಟನ್ ಥ್ರಸ್ಟ್ ಮಟ್ಟದಲ್ಲಿ ಕಾರ್ಯಾಚರಿಸುವಷ್ಟು ಸಶಕ್ತವಾಗಿದ್ದು ಇದು ಎಲ್.ವಿ.ಎಂ. – 3 ಮಿಷನ್ ಗೆ ಬಲ ಕೊಡಲಿದೆ’ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಕ್ರಯೋಜನಿಕ್ ಇಂಜಿನ್ ಸಾಮರ್ಥ್ಯವನ್ನು ಇತ್ತೀಚೆಗಷ್ಟೇ, ಮುಂದಿನ ಗಗನಯಾನ ಪ್ರಾಜೆಕ್ಟ್ ಗಾಗಿ 20 ಟನ್ ಥ್ರಸ್ಟ್ ಲೆವೆಲ್‌ಗೆ ಅಪ್ ಗ್ರೇಡ್ ಮಾಡಲಾಗಿತ್ತು. ಹೆಚ್ಚುವರಿಯಾಗಿ, ಇದನ್ನು ಇನ್ನಷ್ಟು ಸುಧಾರಿತ 22 ಟನ್ ಥ್ರಸ್ಟ್ ಲೆವೆಲ್‌ಗೆ ಭವಿಷ್ಯದಲ್ಲಿ ಸಿ32 ಹಂತಕ್ಕೆ ಎಲ್.ಎಂ.ವಿ.3. ಲಾಂಚ್ ವೆಹಿಕಲ್‌ನ ಪ್ಲೆಲೋಡ್ ಸಾಮರ್ಥ್ಯಕ್ಕೆ ಸರಿಹೊಂದುವಂತೆ ಸುಧಾರಿಸಲಾಗಿದೆ.

ಇದನ್ನೂ ಓದಿ: Allu Arjun Arrest: ಅಲ್ಲು ಅರ್ಜುನ್‌ಗೆ ಬಿಗ್‌ ರಿಲೀಫ್‌; ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರು

ಈ ಪರಿಕ್ಷೆಯಿಂದ ಲಭ್ಯವಾಗಿರುವ ಇನ್ನೊಂದು ಹೊಸ ಫಲಿತಾಂಶವೆಂದರೆ, ಬಹು-ಅಂಶಗಳ ಜ್ವಲನಕಾರಿ ಸಾಮರ್ಥ್ಯ, ಇದರಿಂದ ಈ ಕ್ರಯೋಜನಿಕ್ ಎಂಜಿನ್‌ಗೆ ರಿಸ್ಟಾರ್ಟ್ ಸಾಮರ್ಥ್ಯ ಲಭಿಸಲಿದೆ. ಇದರ ಮೂಲಕ ಇಂಧನ ಪೂರೈಕೆ ನಿಯಂತ್ರಕ ಪೈಪ್ ಮುಚ್ಚುಗಡೆಯಾಗದ ವಿಚಾರದಲ್ಲಿ ಕ್ರಯೋಜನಿಕ್ ಇಂಜಿನ್ ವಿಶಿಷ್ಟ ಸವಾಲಿನಲ್ಲಿ ಇಂಜಿನ್ ತನಾಗೇ ರಿಸ್ಟಾರ್ಟ್ ಆಗಲಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ ವಾಕ್ಯೂಮ್ ಇಗ್ಮಿಷನ್ ಯಶಸ್ವಿಯಾಗಿ ಪ್ರಾತಕ್ಷಿಕೆಗೊಂಡಿದೆ ಎಂದು ಇಸ್ರೋ ಖಚಿತಪಡಿಸಿದೆ.

ಹೈ ಆಟಿಟ್ಯೂಡ್ ಪರೀಕ್ಷೆಗಳಿಗೆ ಹೋಲಿಸಿದರೆ ಈ ಸೌಲಭ್ಯವು ಕಡಿಮೆ-ವೆಚ್ಚದಾಯಕ ಹಾಗೂ ಸಂಕೀರ್ಣ ಪರೀಕ್ಞಾ ವಿಧಾನವಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.