Friday, 13th December 2024

ಎಂಜಿಎಂ ಕಚೇರಿಗಳ ಮೇಲೆ ಐಟಿ ಇಲಾಖೆ ದಾಳಿ

ಚೆನ್ನೈ: ರಾಣಿಪೇಟೆಯಲ್ಲಿರುವ ಎಂಜಿಎಂ ಕಚೇರಿಗೆ 15ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಆರಂಭಿಸಿದ್ದಾರೆ.ಮನರಂಜನಾ ಉದ್ಯಮದ ಮುಂಚೂಣಿ ಸಂಸ್ಥೆ ಎಂಜಿಎಂನ ಸಮೂಹದ ಚೆನ್ನೈ, ತಿರುನಲ್ವೇಲಿ ಮತ್ತು ಬೆಂಗಳೂರು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ನಡೆಸಿದೆ.

ಐಟಿ ಅಧಿಕಾರಿಗಳು ವಿವಿಧ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ. ಚೆನ್ನೈನ ರಾಣಿಪೇಟೆಯಲ್ಲಿರುವ ಎಂಜಿಎಂ ಕಚೇರಿಗೆ 15ಕ್ಕೂ ಹೆಚ್ಚು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲನೆ ಆರಂಭಿಸಿದ್ದಾರೆ.

ಥೀಮ್ ಪಾರ್ಕ್, ಮದ್ಯ ಮತ್ತು ಹೊಟೆಲ್ ಉದ್ಯಮಗಳನ್ನು ಎಂಜಿಎಂ ಗ್ರೂಪ್ ನಿರ್ವಹಿಸುತ್ತಿದೆ.