Wednesday, 11th December 2024

ಬಾಲಕಿಯ ಅತ್ಯಾಚಾರ: ಐಟಿಬಿಪಿ ಜವಾನನ ಬಂಧನ

ಗ್ಯಾಂಗ್ಟಾಕ್: 13 ವರ್ಷದ ಬಾಲಕಿಯ ಮೇಲೆ ತನ್ನ ಅಧಿಕೃತ ಕ್ವಾರ್ಟರ್ಸ್‌ನಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಐಟಿಬಿಪಿ ಜವಾನನನ್ನು ಸಿಕ್ಕಿಂನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ ರು ಭಾನುವಾರ ತಿಳಿಸಿದ್ದಾರೆ.

ಪಾಕ್ಯೊಂಗ್ ಜಿಲ್ಲೆಯ ರಂಗ್ಪೋ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ದೂರಿ ನಲ್ಲಿ, ಹದಿಹರೆಯದ ಯುವಕ ಮತ್ತು ಯೋಧ ತನ್ನ ಮಗಳ ಮೇಲೆ ತಿಂಗಳು ಗಟ್ಟಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹುಡುಗಿಯ ತಾಯಿ ಆರೋ ಪಿಸಿದ್ದಾರೆ. ಬಾಲಕನನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಾಖಂಡ್‌ನ ಪಿಥೋರಗಢ್ ಜಿಲ್ಲೆಯ ಧಾರ್ಚುಲಾ ಮೂಲದ ಯೋಧನ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಒಂದೇ ದೂರಿನಲ್ಲಿ, ಸ್ಥಳೀಯ ಹುಡುಗ ಫೆಬ್ರವರಿಯಿಂದ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದಾನೆ ಎಂದು ಹುಡುಗಿಯ ತಾಯಿ ಆರೋಪಿಸಿದ್ದು, ಬಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಾಂಗ್ಪೋದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹುಡುಗ ಮತ್ತು ಐಟಿಬಿಪಿ ಯೋಧನಿಗೆ ಯಾವುದೇ ಸಂಬಂಧವಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.ಆಪಾದಿತ ಅತ್ಯಾಚಾರಗಳು ಮತ್ತು ಹಲ್ಲೆಗಳು ಇಷ್ಟು ದಿನ ಹೇಗೆ ಮುಂದುವರೆದಿದೆ ಎಂಬುದರ ಕುರಿತು ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದರು.