Friday, 13th December 2024

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಟಿಕೆಟ್

ಜಾಮ್ ನಗರ: ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಗುರುವಾರ ಪ್ರಕಟವಾಗಿದ್ದು, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಜಾಮ್ ನಗರ ಉತ್ತರ ಕ್ಷೇತ್ರದಿಂದ ಅಖಾಡಕ್ಕಿಳಿಯಲು ಬಿಜೆಪಿ ಟಿಕೆಟ್ ಸಿಕ್ಕಿದೆ.
ರಿವಾಬ 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯವಾಗಿರುವ ಅವರು, ತಳಮಟ್ಟದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಹಾಗೂ ರಿವಾಬ ಚಾರಿಟಿ ಕಾರ್ಯ ಗಳಿಗೆ ಹೆಸರುವಾಸಿಯಾಗಿದ್ದಾರೆ.
ಕಳೆದ ವರ್ಷ ತಮ್ಮ ಮಗಳ 5ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ 101 ಬಾಲಕಿಯ ರಿಗೆ ಸುಕನ್ಯಾ ಸಮೃದ್ದಿ ಬ್ಯಾಂಕ್ ಖಾತೆ ಗಳನ್ನು ತೆರೆಯುವ ಮೂಲಕ ಅವರು ಸುದ್ದಿ ಯಾಗಿದ್ದರು. ಹೆಣ್ಣು ಮಕ್ಕಳು ಆರ್ಥಿಕವಾಗಿ ಸಬಲರಾಗಲು ನೆರವು ಹಾಗೂ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೂಡಾ ರಿವಾಬ್ ಅವರಿಗೆ ಪತ್ರ ಬರೆುವ ಮೂಲಕ ಅವರ ಚಾರಿಟಿ ಕೆಲಸಗಳನ್ನು ಕೊಂಡಾಡಿದ್ದರು.