Saturday, 14th December 2024

ಮೈಲಿಗಲ್ಲು: 90 ಕೋಟಿ ಲಸಿಕೆ ಸಾಧನೆಗೆ ‘ಜೈ ಅನುಸಂಧನ್’ ಎಂದ ಪ್ರಧಾನಿ ಮೋದಿ

ನವದೆಹಲಿ: ಭಾರತವು ಒಟ್ಟು 90 ಕೋಟಿ ಲಸಿಕೆಗಳ ಮೈಲಿಗಲ್ಲಾದ ದಾಖಲೆ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ವಾರ್ಷಿಕೋತ್ಸವ ದ ಸಂದರ್ಭದಲ್ಲಿ ತಿಳಿಸಿದ್ದಾರೆ.

ಭಾರತವು 90 ಕೋಟಿ ಕೋವಿಡ್19 ಲಸಿಕೆಗಳ ಹೆಗ್ಗುರುತನ್ನು ದಾಟಿದೆ. ಶ್ರೀಶಾಸ್ತ್ರಿ ಜೀ ಅವರು ‘ಜೈ ಜವಾನ್ – ಜೈ ಕಿಸಾನ್’, ಅಟಲ್ ಜೀ ‘ಜೈ ವಿಜ್ಞಾನ’ ಮತ್ತು ಪ್ರಧಾನಿ ನರೇಂದ್ರ ಮೋದಿ ಜೀ ಅವರು ‘ಜೈ ಅನುಸಂಧನ್’ ಘೋಷಣೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಭಾರತ ಒಂದೇ ದಿನದಲ್ಲಿ 2 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆಗಳನ್ನು ನೀಡಿದೆ. ಇನ್ನು ಶುಕ್ರವಾರ 2 ಕೋಟಿ ಕೋವಿಡ್-19 ಲಸಿಕೆ ಡೋಸ್ʼಗಳನ್ನ ನೀಡುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸು ತ್ತಿದ್ದಂತೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲಸಿಕೆಯ ಯಶಸ್ಸನ್ನು ದೇಶದ ವೈದ್ಯರು, ನವೋದ್ಯಮಿಗಳು, ಆಡಳಿತಗಾರರು, ದಾದಿಯರು, ಆರೋಗ್ಯ ರಕ್ಷಣೆ ಮತ್ತು ಎಲ್ಲಾ ಮುಂಚೂಣಿ ಕಾರ್ಯಕರ್ತರಿಗೆ ಸಮರ್ಪಿಸಿದ್ದರು.