Saturday, 14th December 2024

ಜೈಪುರ ಸಾಹಿತ್ಯ ಉತ್ಸವ 2024 ಕಾರ್ಯಕ್ರಮ ಅನಾವರಣ: ವಿಶ್ವ ಸಾಹಿತ್ಯದ ಹೂರಣ

ಜೈಪುರ: ಫೆಬ್ರವರಿ 1ರಿಂದ 5ರವರೆಗೆ ಪಿಂಕಿ ಸಿಟಿ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್‌ ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಜೈಪುರ ಸಾಹಿತ್ಯ ಉತ್ಸವದ ಹದಿನೇಳನೇ ಆವೃತ್ತಿ ಕುರಿತು ಹೆಚ್ಚಿನ ನಿರೀಕ್ಷೆ ವ್ಯಕ್ತವಾಗಿದೆ.

ಈ ವಾರ್ಷಿಕ ಸಾಹಿತ್ಯ ಉತ್ಸವ, ‘ಸಾಹಿತ್ಯದ ಕುಂಭಮೇಳ’ವು ಚರ್ಚೆಗೆ ವಿಶೇಷ ದೃಷ್ಟಿಕೋನಗಳನ್ನು ನೀಡಬಲ್ಲ ಬರಹಗಾರರು, ಭಾಷಣಕಾರರು, ಚಿಂತಕರು ಮತ್ತು ಮಾನವತಾವಾದಿಗಳ ಆತಿಥ್ಯ ವಹಿಸಲು ಸಜ್ಜಾಗಿದೆ. ಉತ್ಸವದ ಕಾರ್ಯಕ್ರಮವು 10 ಭಾರತೀಯ ಭಾಷೆಗಳು ಮತ್ತು 7 ಅಂತಾ ರಾಷ್ಟ್ರೀಯ ಭಾಷೆಗಳಲ್ಲಿ ನಡೆಲಿದ್ದು, ಭಾಷಾ ವೈವಿಧ್ಯದ ಬದ್ಧತೆಗೆ ಸಾಕ್ಷಿಯಾಗಿದೆ.

2024ರ ಆವೃತ್ತಿಯು, 250ಕ್ಕೂ ಭಾಷಣಕಾರರು, ಬೂಕರ್, ಪುಲಿಟ್ಜೆರ್, ಸಾಹಿತ್ಯ ಅಕಾಡೆಮಿ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ್, ಬೈಲೀ ಗಿಫೋರ್ಡ್, ಡಿಎಸ್‌ಸಿ ಪ್ರಶಸ್ತಿ, ಜೆಸಿಬಿ ಪ್ರಶಸ್ತಿ ಮುಂತಾದವುಗಳನ್ನು ಸ್ವೀಕರಿಸಿದ ಗಣ್ಯರನ್ನು ಒಳಗೊಂಡಿದೆ.

ಕಾರ್ಯಕ್ರಮದ ವಿಶೇಷಗಳಿಗಾಗಿ ದಯವಿಟ್ಟು ಅನುಬಂಧ 1ನ್ನು ನೋಡಿ. ಕಾರ್ಯಕ್ರಮದ ಪೂರ್ಣಪಟ್ಟಿಯನ್ನು ವೆಬ್‌ಸೈಟ್‌ ನಲ್ಲಿ ನೋಡಬಹುದು.

ಜೈಪುರ ಸಾಹಿತ್ಯ ಉತ್ಸವದ ಸಹ-ನಿರ್ದೇಶಕಿ ಲೇಖಕಿ ಹಾಗೂ ಪ್ರಕಾಶಕಿ ನಮಿತಾ ಗೋಖಲೆ ಮಾತನಾಡಿ, “ಜೈಪುರ ಸಾಹಿತ್ಯ ಉತ್ಸವವು ಜಗತ್ತನ್ನು ಜೈಪುರಕ್ಕೆ ತರುತ್ತದೆ ಮತ್ತು ಜೈಪುರವನ್ನು ಜಗತ್ತಿಗೆ ಒಯ್ಯುತ್ತದೆ. ಭಾರತೀಯ ಸಾಹಿತ್ಯ ಸಂಪ್ರದಾಯಗಳ ವೈವಿಧ್ಯ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸು ವುದು ನಮ್ಮ ಬದ್ಧತೆಯಾಗಿದೆ. ಸಂಸ್ಕೃತ, ಅವಧಿ, ಒಡಿಯಾ, ಆಸ್ಸಾಮಿ, ಬೆಂಗಾಲಿ, ತಮಿಳು, ಮಲಯಾಳಂ, ಕನ್ನಡ, ಹಿಂದಿ, ರಾಜಸ್ಥಾನಿ, ಉರ್ದು ಮತ್ತು ಪಂಜಾಬಿ ಭಾಷೆಗಳ ಸಾಹಿತ್ಯ ಸಂವೇದನೆಗಳಿಗೆ ಇದು ವೇದಿಕೆಯಾಗಲಿದೆ. ಸ್ಥಳೀಯ ಮತ್ತು ಬುಡಕಟ್ಟು ಧ್ವನಿಗಳು ಮತ್ತು ಗುರುತಿನ ಅಭಿವ್ಯಕ್ತಿಗಳನ್ನು ಅನ್ವೇಷಿಸುವ ಮೌಖಿಕ ಸಂಪ್ರದಾಯಗಳಿಗೆ ನಾವು ವಿಶೇಷ ಒತ್ತು ನೀಡುತ್ತೇವೆ” ಎಂದರು.

“ನಾವು ಜಗತ್ತಿನ ಎಲ್ಲ ದೇಶಗಳು ಮತ್ತು ಸಂಸ್ಕೃತಿಗಳ ಸಾಹಿತ್ಯವನ್ನು ಹತ್ತಿರಕ್ಕೆ ತರುತ್ತೇವೆ. ಜೈಪುರ ಸಾಹಿತ್ಯ ಉತ್ಸವದ ಆಹ್ಲಾದಕರವಾಗಿರುತ್ತದೆ, ಸಾಹಿತ್ಯಿಕ ಕಲ್ಪನೆಗಳ ಆಗರವಾಗಿರುತ್ತದೆ”ಎಂದು ಗೋಖಲೆ ಉಲ್ಲೇಖಿಸಿದ್ದಾರೆ.

ಜೈಪುರ ಸಾಹಿತ್ಯ ಉತ್ಸವದ 17ನೇ ಆವೃತ್ತಿಯ ಕುರಿತು ಮಾತನಾಡಿದ ಜೈಪುರ ಸಾಹಿತ್ಯ ಉತ್ಸವದ ಸಹ-ನಿರ್ದೇಶಕ, ಬರಹಗಾರ ಮತ್ತು ಇತಿಹಾಸಕಾರ ವಿಲಿಯಂ ಡಾಲ್‌ರಿಂಪಲ್, “ಪ್ರತಿವರ್ಷ ನಾವು ಜೈಪುರ ಸಾಹಿತ್ಯ ಉತ್ಸವದ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಆದರೆ 2024 ನಮ್ಮ ಅತ್ಯುತ್ತಮ ಉತ್ಸವವಾಗಲಿದೆ.

ಟೀಮ್ ವರ್ಕ್ ಆರ್ಟ್ಸ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಜೈಪುರ ಸಾಹಿತ್ಯ ಉತ್ಸವದ ನಿರ್ಮಾಪಕ ಸಂಜೋಯ್ ಕೆ.ರಾಯ್ ಮಾತನಾಡಿ, “2024ರಲ್ಲಿ ಜೈಪುರ ಸಾಹಿತ್ಯ ಉತ್ಸವದ 17ನೇ ಆವೃತ್ತಿಯು ಸಾಹಿತ್ಯ ವಿಮರ್ಶೆ, ವಿಜ್ಞಾನ ಮತ್ತು ಔಷಧ, ಪರಿಸರ ಮತ್ತು ಹವಾಮಾನ ನ್ಯಾಯ, ಮಾನಸಿಕ ಆರೋಗ್ಯ, ಭೌಗೋಳಿಕ ರಾಜಕೀಯ ವಿಷಯಗಳ ಮೇಲೆ ಕೇಂದ್ರೀಕರಿಸಿದೆ. ಪ್ರಶಸ್ತಿ ಪುರಸ್ಕೃತ ಬರಹಗಾರರಾದ ಡಾಮನ್ ಗಾಲ್‌ಗಟ್, ಮೇರಿ ಬಿಯರ್ಡ್, ಹರ್ನಾನ್ ಡಯಾಜ್, ಬಿ. ಜಯಮೋಹನ್, ಸೈಮನ್ ಸ್ಕಮಾ, ಮೃದುಲಾ ಗರ್ಗ್ ಮತ್ತು ಮಾರ್ಕಸ್ ಡು ಸೌತಾಯ್ ಇದನ್ನು ಮುನ್ನಡೆಸಲಿದ್ದಾರೆ.

ದಕ್ಷಿಣ ಏಷ್ಯಾದ ಅತಿದೊಡ್ಡ ಪ್ರಕಾಶನ ಸಮ್ಮೇಳನವಾದ ಪ್ರತಿಷ್ಠಿತ ಜೈಪುರ ಬುಕ್ ಮಾರ್ಕ್ (ಜೆಬಿಎಂ) ಜೈಪುರ ಸಾಹಿತ್ಯ ಉತ್ಸವದಲ್ಲಿ ತನ್ನ 10ನೇ ಆವೃತ್ತಿಯನ್ನು ಆಚರಿಸಿಕೊಳ್ಳಲಿದೆ. ಬಿ2ಬಿ ವಿಭಾಗವಾಗಿದ್ದು, ಜೈಪುರ ಸಾಹಿತ್ಯ ಉತ್ಸವಕ್ಕೆ ಸಮಾನಾಂತರವಾಗಿ ನಡೆಯಲಿದೆ.