Wednesday, 11th December 2024

ನೇಣು ಹಾಕಿಕೊಳ್ಳುವ ಆಟ: ಬಾಲಕನ ಸಾವು

ಲೌನ್: ಉತ್ತರ ಪ್ರದೇಶದ ಜಲೌನ್ ನಲ್ಲಿ ಹಗ್ಗ ಕುಣಿಕೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಆಟ ಆಡುತ್ತಿದ್ದ ಬಾಲಕ ಆಟವಾಡುತ್ತಲೇ ಪ್ರಾಣ ಕಳೆದುಕೊಂಡಿದ್ದಾರೆ.

ತನ್ನ ಸಹೋದರ ಮತ್ತು ಸಹೋದರಿಯರೊಂದಿಗೆ ಆಟವಾಡುತ್ತಿತ್ತು.

ಬಾಲಕ ನಿಂತಿದ್ದ ಸ್ಟೂಲ್‌ ಪಕ್ಕಕ್ಕೆ ಜಾರಿ ಬಿದ್ದಿದ್ದು, ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಈ ವೇಳೆ ಅವನ ಸಹೋದರ ಮತ್ತು ಸಹೋದರಿ ಕಿರುಚಾಡಿದ್ದಾರೆ.  ಪಕ್ಕದ ಕೋಣೆಯಲ್ಲಿ ಮಲಗಿದ್ದ ತಾಯಿ ಓಡಿ ಬಂದರೂ ತನ್ನ ಕುರುಡುತನದಿಂದ ಮಗನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.

ಜಲೌನ್‌ನ ಒರೈಯ ಕಾನ್ಶಿರಾಮ್ ಕಾಲೋನಿಯಲ್ಲಿ ವಾಸಿಸುತ್ತಿರುವ 50 ವರ್ಷದ ಸಂಗೀತಾ ಹುಟ್ಟಿನಿಂದಲೇ ಅಂಧ. ಘಟನೆಯ ವೇಳೆ ಪತಿ ಖೇಮಚಂದ್ರ ಮಾರುಕಟ್ಟೆಗೆ ಹೋಗಿದ್ದರು.

ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದಲ್ಲಿ ವಾಸವಿದ್ದ ಕೆಲವರು ಸ್ಥಳಕ್ಕಾಗಮಿಸಿ ಮಗುವನ್ನು ಕುಣಿಕೆಯಿಂದ ಕೆಳಗಿಳಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದರು.