ನವದೆಹಲಿ: ಐದು ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಸುಮಾರು 200 ಪ್ರಯಾಣಿಕರೊಂದಿಗೆ ಟೋಕಿಯೊಗೆ ಹೊರಟಿದ್ದ ಜಪಾನ್ ಏರ್‌ಲೈನ್ಸ್ ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಮರಳಿದೆ.
ಮಂಗಳವಾರ ರಾತ್ರಿ 7.20 ರ ಸುಮಾರಿಗೆ ಟೋಕಿಯೊದ ಹನೇಡಾ ವಿಮಾನ ನಿಲ್ದಾಣಕ್ಕೆ ವಿಮಾನ ಟೇಕ್ ಆಫ್ ಆಗಿದ್ದು, ತಾಂತ್ರಿಕ ಸಮಸ್ಯೆಯಿಂದಾಗಿ ಬುಧವಾರ ಮಧ್ಯರಾತ್ರಿ 12.45 ರ ಸುಮಾರಿಗೆ ಮರಳಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.
ಎಲ್ಲಾ ಪ್ರಯಾಣಿಕರಿಗೆ ದೆಹಲಿಯ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದೆ. ಮರು ನಿಗದಿಪಡಿಸಲಾದ ವಿಮಾನವು ದೆಹಲಿಯಿಂದ ಟೋಕಿಯೊಗೆ ಸಂಜೆ ತಡವಾಗಿ ಟೇಕ್ ಆಫ್ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಯಾಣಿಕರು ಹೇಳಿದ್ದಾರೆ.