Friday, 13th December 2024

ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅವಿರೋಧ ಆಯ್ಕೆ

ವದೆಹಲಿ: ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಮತ್ತೊಂದು ಅವಧಿಗೆ ಪಕ್ಷದ ಅಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಪ್ತ ಸಿಂಗ್‌ ಅವಿರೋಧವಾಗಿ ಆಯ್ಕೆಯಾ ದರು ಎಂದು ಜೆಡಿಯು ಪ್ರಧಾನ ಕಾರ್ಯ ದರ್ಶಿ ಅಫಾಕ್ ಅಹ್ಮದ್ ಖಾನ್ ಹೇಳಿದರು.

ಜೆಡಿಯುನ ರಾಷ್ಟ್ರೀಯ ಮಂಡಳಿ ಡಿ.10 ರಂದು ಪಟ್ನಾದಲ್ಲಿ ಸಭೆ ಸೇರಲಿದ್ದು, ಸಿಂಗ್ ಅವರ ಆಯ್ಕೆಯನ್ನು ಅನುಮೋದಿಸಲಿದೆ. ಬಳಿಕ ರಾಜ್ಯ ರಾಜಧಾನಿಯಲ್ಲಿ ತನ್ನ ಪೂರ್ಣ ಅಧಿವೇಶನ ನಡೆಸಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ಜೆಡಿಯು ಬಿಜೆಪಿ ಮಿತ್ರ ಪಕ್ಷವಾಗಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ನಂತರ 2021ರ ಜುಲೈನಲ್ಲಿ (ಆರ್‌ಸಿಪಿ ಸಿಂಗ್ ರಾಜೀನಾಮೆ ಬಳಿಕ) ಅವರು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.