Wednesday, 11th December 2024

ಜೆಡಿಯು ಮುಖಂಡನ ಗುಂಡಿಕ್ಕಿ ಹತ್ಯೆ

ಪಾಟ್ನಾ: ಪಾಟ್ನಾದ ದಾಂಗ್‍ಪುರ ಪ್ರದೇಶದಲ್ಲಿ ಅಪರಿಚಿತ ದುಷ್ಕರ್ಮಿಗಳು ಜೆಡಿಯು ಮುಖಂಡನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದಾಂಗ್‍ಪುರ ನಗರ ಪರಿಷತ್‍ನ ಉಪಾ ಧ್ಯಕ್ಷ ದೀಪಕ್ ಕುಮಾರ್ ಮೆಹ್ತಾ ಗುಂಡಿನ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆಡಿಯು ಮುಖಂಡ ಮೆಹ್ತಾ ಭೋಜನ ಮುಗಿಸಿ ತಮ್ಮ ನಿವಾಸದ ಆವರಣದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ದಾಳಿ ಕೋರರು ಗುಂಡು ಹಾರಿಸಿದ್ದು, ಎದೆಗೆ ಒಂದು ಗುಂಡು, ತಲೆಗೆ ಮತ್ತೊಂದು ಗುಂಡು ತಗುಲಿದೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾ ಯಿತಾದರೂ ಆಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಉದ್ರಿಕ್ತಗೊಂಡ ಸ್ಥಳೀಯರು ನಸ್ರೀಗಂಜ್ ಪೊಲೀಸ್ ಠಾಣೆಯನ್ನು ಧ್ವಂಸಗೊಳಿಸಿದ್ದಾರೆ. ನಂತರ ಡಾಣಾಪುರ ಗಾಂ ಮೈದಾನ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ದೀಪಕ್ ಮೆಹ್ತಾ 2020ರ ವಿಧಾನಸಭೆ ಚುನಾವಣೆಯಲ್ಲಿ ದಾನಪುರದಿಂದ ಸ್ಫರ್ಧಿಸಿದ್ದರು. ನಂತರ ಈ ಪಕ್ಷ ಜೆಡಿಯುನಲ್ಲಿ ವಿಲೀನಗೊಂಡಿತ್ತು. ದೀಪ್‍ಕುಮಾರ್ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.