Friday, 13th December 2024

ಜೆಇಇ ಅಡ್ವಾನ್ಸಡ್​ 2021: ಜೈಪುರದ ಮೃದುಲ್​ ಅಗರ್​​ವಾಲ್ ಪ್ರಥಮ ರ‍್ಯಾಂಕ್

ನವದೆಹಲಿ: ಐಐಟಿಗಳ ಪ್ರವೇಶಾತಿಗಾಗಿ ನಡೆಸುವ ಜೆಇಇ ಅಡ್ವಾನ್ಸಡ್​ 2021ರ ಫಲಿತಾಂಶ ಬಿಡುಗಡೆ ಯಾಗಿದೆ.

ರಾಜಸ್ಥಾನದ ಜೈಪುರ ಮೂಲದ ಮೃದುಲ್​ ಅಗರ್​​ವಾಲ್​, ಅತಿ ಹೆಚ್ಚು ಅಂಕಗಳನ್ನು ಗಳಿಸಿ ಇತಿಹಾಸ ರಚಿಸಿ ದ್ದಾನೆ. ದೆಹಲಿಯ ಕಾವ್ಯ ಚೋಪ್ರ ಎಂಬ ವಿದ್ಯಾರ್ಥಿನಿ ಬಾಲಕಿಯರಲ್ಲಿ ಅತಿ ಹೆಚ್ಚು ಅಂಕ ಗಳನ್ನು ಗಳಿಸಿದ್ದಾಳೆ.

ಅರ್ಹತಾ ಪರೀಕ್ಷೆ ಜೆಇಇ ಮೇಯ್ಸ್​ನ ಮಾರ್ಚ್​ ಸುತ್ತಿನಲ್ಲಿ ಶೇ.100 ಪರ್ಸೆಂಟೈಲ್​ ಗಳಿಸಿ, ದೆಹಲಿ ಐಐಟಿ ವಲಯ ದಿಂದ ಜೆಇಇ ಅಡ್ವಾನ್ಸಡ್​ ಪರೀಕ್ಷೆ ಬರೆದಿದ್ದ ಮೃದುಲ್​ ಅಗರ್​ವಾಲ್​, 360 ಕ್ಕೆ 348 ಅಂಕ (ಶೇಕಡ 96.6) ಗಳನ್ನು ಗಳಿಸಿ ಪ್ರಥಮ ರಾಂಕ್​ ಪಡೆದಿದ್ದಾನೆ.  ಇದು ಐಐಟಿ ಪ್ರವೇಶ ಪರೀಕ್ಷೆ ಗಳಲ್ಲಿ ಈವರೆಗೆ ಯಾವುದೇ ಅಭ್ಯರ್ಥಿ ಗಳಿಸಿರುವ ಅತಿ ಹೆಚ್ಚಿನ ಅಂಕವಾಗಿದೆ ಎನ್ನಲಾಗಿದೆ.

ಜೆಇಇ (ಅಡ್ವಾನ್ಸಡ್​) 2021ರ ಎರಡೂ ಪತ್ರಿಕೆಗಳಿಗೆ ದೇಶದ ವಿವಿಧೆಡೆಗಳಿಂದ ಒಟ್ಟು 1,41,699 ಅಭ್ಯರ್ಥಿಗಳು ಹಾಜರಾಗಿದ್ದರು. ಅವರಲ್ಲಿ 41,862 ಅಭ್ಯರ್ಥಿಗಳು ಅರ್ಹತೆ ಗಳಿಸಿದ್ದು, ಇವರಲ್ಲಿ 6,452 ವಿದ್ಯಾರ್ಥಿನಿಯ ರಿದ್ದಾರೆ.

ಐಐಟಿ ದೆಹಲಿ ಜೋನ್​ಗೆ ಸಲ್ಲುವ ಕಾವ್ಯ ಚೋಪ್ರ, 360ಕ್ಕೆ 286 ಅಂಕಗಳನ್ನು ಪಡೆದು 98ನೇ ಸ್ಥಾನ ಗಳಿಸಿದ್ದಾಳೆ; ವಿದ್ಯಾರ್ಥಿನಿಯರಲ್ಲಿ ಮೊದಲಿ ಗಳಾಗಿದ್ದಾಳೆ.