ರಾಂಚಿ: ಚುನಾವಣೋತ್ತರ ಸಮೀಕ್ಷೆಯನ್ನು ತಲೆಕೆಳಗಾಗಿಸಿ ಜಾರ್ಖಂಡ್ನಲ್ಲಿ ಆಡಳಿತರೂಢ ಜೆಎಂಎಂ (Jharkhand Mukti Morcha-JMM) ಸರಳ ಬಹುಮತದತ್ತ ಸಾಗಿದ್ದು, ಮತ್ತೊಮ್ಮೆ ಸರ್ಕಾರ ರಚಿಸಲಿದೆ. ಜೆಎಂಎಂ ನೇತೃತ್ವದ ʼಇಂಡಿಯಾʼ ಮೈತ್ರಿಕೂಟ 81 ಸೀಟುಗಳ ಪೈಕಿ 51 ಕಡೆಗಳಲ್ಲಿ ಮುನ್ನಡೆ ಸಾಧಿಸಿದೆ. ʼಇಂಡಿಯಾʼ ಮೈತ್ರಿ ಕೂಟದ ಗೆಲುವಿನಲ್ಲಿ ಮೈಯಾ ಸಮ್ಮಾನ್ (Maiya Samman) ಯೋಜನೆ ಪ್ರಮುಖ ಪಾತ್ರವಹಿಸಿದೆ. ಇದು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಯಾಗಿದ್ದು ನೇರವಾಗಿ ಇದರ ಪ್ರಯೋಜನಗಳನ್ನು ಮಹಿಳೆಯರು ಪಡೆಯುತ್ತಾರೆ (Jharkhand Election Result).
ಮೈಯಾ ಸಮ್ಮಾನ್ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಯಾಗಿದ್ದು, ನೇರವಾಗಿ ಇದರ ಪ್ರಯೋಜನಗಳನ್ನು ಮಹಿಳೆಯರು ಪಡೆಯುತ್ತಾರೆ. ಇದೀಗ ಈ ಯೋಜನೆ ರಾಜ್ಯದಲ್ಲಿ ಗೇಮ್ ಚೇಂಜರ್ ಆಗಿ ಬದಲಾಗಿದೆ. ಮೈಯಾ ಸಮ್ಮಾನ್ ಯೋಜನೆ ಜಾರ್ಖಂಡ್ ಸರ್ಕಾರವು ಪರಿಚಯಿಸಿದ ವಿನೂತನ ಯೋಜನೆಯಾಗಿದ್ದು, ಮಹಿಳೆಯರಿಗೆ, ವಿಶೇಷವಾಗಿ ತಾಯಂದಿರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ಮತ್ತು ಅವರ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ. ಸದ್ಯ ಈ ಯೋಜನೆ ಸರ್ಕಾರದ ಕೈ ಹಿಡಿದಿದೆ.
Maharashtra election results are opposite to our expectations.
— Rohini Anand (@mrs_roh08) November 23, 2024
We are happy that we have performed well in Jharkhand & we are going to repeat the govt in the state.
— Supriya Shrinate #ElectionResults pic.twitter.com/MbFsEZAStE
ನುಸುಳುಕೋರರು ಬುಡಕಟ್ಟು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಪ್ರಚಾರ ನಡೆದಿದ್ದು, ಹೆಚ್ಚು ಪರಿಣಾಮ ಬೀರಿದಂತೆ ಕಾಣಿಸುತ್ತಿಲ್ಲ. ಬುಡಕಟ್ಟು-ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಸಂತಾಲ್ ಪರಗಣ ಪ್ರದೇಶದಲ್ಲಿ ಪಕ್ಷ ಹೀನಾಯವಾಗಿ ಸೋಲು ಕಂಡಿದೆ. ಗ್ರಾಮಾಂತರ ಪ್ರದೇಶಗಳಲ್ಲಿಯೂ ಬಿಜೆಪಿ ನೇತೃತ್ವದ ಎನ್ಡಿಎ ಕಳಪೆ ಪ್ರದರ್ಶನ ನೀಡಿದೆ.
ಮುಖ್ಯಮಂತ್ರಿ ಹೇಮಂತ್ ಸೊರೇನ್ (Hemant Soren) ನೇತೃತ್ವದ ಜೆಎಂಎಂ ಈ ಬಾರಿ 81 ಕ್ಷೇತ್ರಗಳ ಪೈಕಿ 41 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಮೈತ್ರಿಕೂಟದ ಇತರ ಪಕ್ಷಗಳಾದ ಕಾಂಗ್ರೆಸ್ 30, ಆರ್ಜೆಡಿ 6 ಮತ್ತು ಸಿಪಿಐ (ಎಂ) 4 ಸ್ಥಾನಗಳಲ್ಲಿ ಕಣಕ್ಕಿಳಿದಿದ್ದವು. ಇನ್ನು ಎನ್ಡಿಎ ಒಕ್ಕೂಟದಲ್ಲಿ ಬಿಜೆಪಿ 68, ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಯೂನಿಯನ್ (All Jharkhand Students Union-AJSU) 10, ಜನತಾ ದಳ (ಸಂಯುಕ್ತ) 2 ಮತ್ತು ಲೋಕ್ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) 1 ಕಡೆ ಅದೃಷ್ಟ ಪರೀಕ್ಷೆಗೆ ಮುಂದಾಗಿತ್ತು.
ತಲೆ ಕೆಳಗಾದ ಸಮೀಕ್ಷೆ
ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಎನ್ಡಿಎ ಒಕ್ಕೂಟಕ್ಕೆ ಬಹುಮತ ಸಿಗಲಿದೆ ಎಂದು ಊಹಿಸಿದ್ದವು. ಬಿಜೆಪಿ ನೇತೃತ್ವದ ಬಿಜೆಪಿ 42-47 ಸೀಟುಗಳಲ್ಲಿ ಮತ್ತು ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟ 25-30 ಸೀಟು ಗೆಲ್ಲಲಿದೆ ಎಂದು ಹೇಳಿದ್ದವು. ಸದ್ಯ ಈ ಸಮೀಕ್ಷಾ ವರದಿ ತಲೆಕೆಳಗಾಗಿದೆ. ತಮ್ಮ ಮೈತ್ರಿಕೂಟ ಸರಳ ಬಹುಮತದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಸಭೆ ಆರಂಭಿಸಿದ್ದಾರೆ. ಜಾರ್ಖಂಡ್ನಲ್ಲಿ ಬಹುಮತ ಸಾಧಿಸಿ ಸರ್ಕಾರ ರಚಿಸಲು 41 ಸ್ಥಾನಗಳಲ್ಲಿ ಗೆಲುವುದು ಅಗತ್ಯ.
ಮಹಾರಾಷ್ಟ್ರದಲ್ಲಿ ಮಹಾಯುತಿ ಮ್ಯಾಜಿಕ್
ಮಹಾರಾಷ್ಟ್ರದಲ್ಲಿ ಆಡಳಿತರೂಢ ಮಹಾಯುತಿ ಮೈತ್ರಿಕೂಟ ಮತ್ತೊಮ್ಮೆ ಅದಿಕಾರಕ್ಕೆ ಬರಲಿದೆ. 288 ಸೀಟುಗಳ ಪೈಕಿ ಬರೋಬ್ಬರಿ 226 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ʼʼನಾವ್ಯಾರೂ ಈ ಫಲಿತಾಂಶ ನಿರೀಕ್ಷಿಸಿರಲಿಲ್ಲ. ಇದು ನಮ್ಮ ನಿರೀಕ್ಷೆಗಳನ್ನು ಮೀರಿದೆ. ಮೈತ್ರಿಕೂಟದ ಮೂರೂ ಪಕ್ಷಗಳು ಕುಳಿತು ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸಲಿವೆʼʼ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿಳಿಸಿದ್ದಾರೆ. ನ. 26ರಂದು ಸರ್ಕಾರ ರಚನೆಯಾಗಲಿದೆ. ಶೀಘ್ರದಲ್ಲೇ ಮುಖ್ಯಮಂತ್ರಿಯನ್ನು ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Maharashtra Election Result: ಮಹಾರಾಷ್ಟ್ರದಲ್ಲಿ ಪ್ರಚಂಡ ಗೆಲುವಿನತ್ತ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ