ಬೆಂಗಳೂರು: ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಿರುವ ಭಾರತ ಸರ್ಕಾರದ ನ್ಯಾಷನಲ್ ಸೀಡ್ಸ್ ಕಾರ್ಪೋರೇಷನ್ ಲಿಮಿಟೆಡ್ (National Seeds Corporation Limited) ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ (NSCL Recruitment 2024). ಟ್ರೈನಿ, ಮ್ಯಾನೇಜ್‌ಮೆಂಟ್ ಟ್ರೈನಿ ಸೇರಿ ಸುಮಾರು 188 ಹುದ್ದೆಗಳಿವೆ. ಐಟಿಐ, ಡಿಪ್ಲೊಮಾ, ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಡಿ. 8. ಈ ಹಿಂದೆ ಕೊನೆಯ ದಿನಾಂಕ ನ. 30 ಎಂದು ಹೇಳಲಾಗಿತ್ತು. ಕೆಲವೊಂದು ಕಾರಣಕ್ಕೆ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಡೆಪ್ಯುಟಿ ಜನರಲ್ ಮ್ಯಾನೇಜರ್ – 1 ಹುದ್ದೆ, ವಿದ್ಯಾರ್ಹತೆ: ಎಂಎಸ್‌ಡಬ್ಲ್ಯು, ಎಂ.ಎ, ಎಂಬಿಎ, ಸ್ನಾತಕೋತ್ತರ ಪದವಿ
ಅಸಿಸ್ಟಂಟ್ ಮ್ಯಾನೇಜರ್ – 1 ಹುದ್ದೆ, ವಿದ್ಯಾರ್ಹತೆ: ಎಂಎಸ್‌ಡಬ್ಲ್ಯು, ಎಂ.ಎ, ಎಂಬಿಎ, ಸ್ನಾತಕೋತ್ತರ ಪದವಿ
ಮ್ಯಾನೇಜ್ಮೆಂಟ್ ಟ್ರೈನಿ (ಎಚ್ಆರ್) – 2 ಹುದ್ದೆ, ವಿದ್ಯಾರ್ಹತೆ: ಎಂಬಿಎ, ಸ್ನಾತಕೋತ್ತರ ಪದವಿ
ಮ್ಯಾನೇಜ್ಮೆಂಟ್ ಟ್ರೈನಿ (ಕ್ವಾಲಿಟಿ ಕಂಟ್ರೋಲ್) – 2 ಹುದ್ದೆ, ವಿದ್ಯಾರ್ಹತೆ: ಎಂ.ಎಸ್‌ಸಿ
ಮ್ಯಾನೇಜ್ಮೆಂಟ್ ಟ್ರೈನಿ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್) – 1 ಹುದ್ದೆ, ವಿದ್ಯಾರ್ಹತೆ: ಬಿ.ಇ ಅಥವಾ ಇಎಸ್‌ಇ/ಇಇಇಯಲ್ಲಿ ಬಿ.ಟೆಕ್
ಸೀನಿಯರ್ ಟ್ರೈನಿ (ವಿಜಿಲೆನ್ಸ್) – 2 ಹುದ್ದೆ, ವಿದ್ಯಾರ್ಹತೆ: ಎಂಎಸ್‌ಡಬ್ಲ್ಯು, ಎಂ.ಎ, ಎಂಬಿಎ, ಸ್ನಾತಕೋತ್ತರ ಪದವಿ
ಟ್ರೈನಿ (ಕೃಷಿ) – 49 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಟ್ರೈನಿ (ಕ್ವಾಲಿಟಿ ಕಂಟ್ರೋಲ್) – 11 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಟ್ರೈನಿ (ಮಾರ್ಕೆಟಿಂಗ್) – 33 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಟ್ರೈನಿ (ಎಚ್.ಆರ್.) 16 ಹುದ್ದೆ, ವಿದ್ಯಾರ್ಹತೆ: ಪದವಿ
ಟ್ರೈನಿ (ಸ್ಟೆನೋಗ್ರಾಫರ್) 15 ಹುದ್ದೆ, ವಿದ್ಯಾರ್ಹತೆ: ಪದವಿ, ಡಿಪ್ಲೊಮಾ
ಟ್ರೈನಿ (ಅಕೌಂಟ್ಸ್) 8 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ
ಟ್ರೈನಿ (ಅಗ್ರಿಕಲ್ಚರ್ ಸ್ಟೋರ್ಸ್) 19 ಹುದ್ದೆ, ವಿದ್ಯಾರ್ಹತೆ: ಬಿ.ಎಸ್‌ಸಿ
ಟ್ರೈನಿ (ಎಂಜಿನಿಯರಿಂಗ್ ಸ್ಟೋರ್ಸ್) – 7 ಹುದ್ದೆ, ವಿದ್ಯಾರ್ಹತೆ: ಡಿಪ್ಲೊಮಾ, ಐಟಿಐ
ಟ್ರೈನಿ (ಟೆಕ್ನಿಷಿಯನ್) 21 ಹುದ್ದೆ, ವಿದ್ಯಾರ್ಹತೆ: ಐಟಿಐ
ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 27-50 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ (ಎನ್‌ಸಿಎಸ್) ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಯುರ್/ಇಡಬ್ಲ್ಯುಎಸ್/ಒಬಿಸಿ/ಮಾಜಿ ಸೈನಿಕರು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕು. ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
NSCL Recruitment 2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ
ಕೊನೆಯ ದಿನಾಂಕ ವಿಸ್ತರಿಸಿದ ಪ್ರಕಟಣೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://apply.registernow.in/NationalSeedsCorp/Multipleposts24/Applicant/Register)
- ಹೆಸರು ನೋಂದಾಯಿಸಿ.
- ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
- ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದವರು ಮಾತ್ರ).
- ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
- ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್ ನಂಬರ್: 8595904407ಕ್ಕೆ ಸಂಪರ್ಕಿಸಿ.
ಈ ಸುದ್ದಿಯನ್ನೂ ಓದಿ: Job Guide: ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್‌ನಲ್ಲಿದೆ 723 ಹುದ್ದೆ; ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿದವರೂ ಅಪ್ಲೈ ಮಾಡಿ