Friday, 13th December 2024

Job News: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ವಾರ್ಷಿಕ 29 ಲಕ್ಷ ರೂ. ಸಂಬಳ!

Job Guide

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ( National Highways Authority of India) ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ (Head-Technical and Head-Toll Operation) ಹುದ್ದೆಗಳಿಗೆ (Job Guide) ಅರ್ಜಿ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಹೀಗಾಗಿ ಇನ್ನೂ ಅರ್ಜಿ ಸಲ್ಲಿಸದವರು ಕೂಡಲೇ ಅರ್ಜಿ ಸಲ್ಲಿಸಿ. ಯಾಕೆಂದರೆ ನಾಳೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಚ್ಚಲಿದೆ.

ಅರ್ಜಿ ಸಲ್ಲಿಸುವ ವಿಧಾನ

ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ nhai.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಹುದ್ದೆಯ ವಿವರ

ಹೆಡ್-ಟೆಕ್ನಿಕಲ್ ಮತ್ತು ಹೆಡ್-ಟೋಲ್ ಆಪರೇಷನ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಾಹನ ಸೌಲಭ್ಯ ಸೇರಿದಂತೆ ವಾರ್ಷಿಕ 29,00,000 ರೂ. ಸಂಬಳ ಪಡೆಯಬಹುದು.

ಆರಂಭಿಕ ನೇಮಕಾತಿಯು ಎರಡು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದ್ದೆ. ನ್ಯಾಷನಲ್ ಹೈವೇಸ್ ಇನ್ವಿಟ್ ಪ್ರಾಜೆಕ್ಟ್ ಮ್ಯಾನೇಜರ್ಸ್ ಪ್ರೈವೇಟ್ ಲಿಮಿಟೆಡ್ (NHIPMPL) ನ ಅವಶ್ಯಕತೆ ಮತ್ತು ಅಭ್ಯರ್ಥಿಯ ಕಾರ್ಯಕ್ಷಮತೆಯ ಆಧಾರದ ಮೇಲೆ ವಿಸ್ತರಣೆ ಸಾಧ್ಯತೆಯಿದೆ.

ಅರ್ಹತೆ

ಅರ್ಜಿಯನ್ನು ಭರ್ತಿ ಮಾಡುವಾಗ ಎಚ್ಚರಿಕೆಯಿಂದ ಭರ್ತಿ ಮಾಡಲು ಸೂಚಿಸಲಾಗಿದೆ. ಉದ್ಯೋಗ ವಿವರ, ಅನುಭವ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮತ್ತೆ ನೀಡುವ ಯಾವುದೇ ಸ್ಪಷ್ಟೀಕರಣಗಳನ್ನು ಪರಿಗಣಿಸಲಾಗುವುದಿಲ್ಲ.

ಶೈಕ್ಷಣಿಕ ಅರ್ಹತೆಯನ್ನು ಭಾರತೀಯ ವಿಶ್ವವಿದ್ಯಾನಿಲಯ, ಯುಜಿಸಿ ಅಥವಾ ಎಐಸಿಟಿಇ ಅನ್ವಯವಾಗುವಂತೆ ಗುರುತಿಸಿರುವ ಸಂಸ್ಥೆಗಳಿಂದ ಪಡೆದಿರಬೇಕು. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪೂರ್ಣ ಸಮಯದ, ನಿಯಮಿತ ಬಿ.ಇ./ ಬಿ.ಟೆಕ್ ಪದವಿಯನ್ನು ಪಡೆದಿರಬೇಕು.

ಅಭ್ಯರ್ಥಿಗಳು M/oRTH/IRC ಮಾನದಂಡಗಳಿಗೆ ಅನುಗುಣವಾಗಿ ಸರ್ಕಾರಿ, ಪಿಎಸ್ ಯುಗಳು, ಸ್ವಾಯತ್ತ ಸಂಸ್ಥೆಗಳು ಅಥವಾ ರಸ್ತೆ ವಲಯದೊಳಗಿನ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 20 ವರ್ಷಗಳ ಅನುಭವವನ್ನು ಹೊಂದಿರಬೇಕು.

ವಯೋಮಿತಿ

ಅಭ್ಯರ್ಥಿಗಳ ವಯಸ್ಸು 55 ವರ್ಷಕ್ಕಿಂತ ಹೆಚ್ಚಿರಬಾರದು. ಆದರೆ ನಿವೃತ್ತ ಅಥವಾ ನಿವೃತ್ತಿ ಹೊಂದಿದ ಸರ್ಕಾರಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು 63 ವರ್ಷಗಳು.

Job Guide: ಐಟಿಐ, ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದವರಿಗೆ ಗುಡ್‌ನ್ಯೂಸ್‌; ಸೀಡ್ಸ್‌ ಕಾರ್ಪೋರೇಷನ್‌ನಲ್ಲಿದೆ 188 ಹುದ್ದೆ

ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸುವ, ಮಿತಿಗೊಳಿಸುವ, ವಿಸ್ತರಿಸುವ, ಮಾರ್ಪಡಿಸುವ, ಮತ್ತೆ ತೆರೆಯುವ ಅಥವಾ ಬದಲಾಯಿಸುವ ಹಕ್ಕನ್ನು ನ್ಯಾಷನಲ್ ಹೈವೇಸ್ ಇನ್ವಿಟ್ ಪ್ರಾಜೆಕ್ಟ್ ಮ್ಯಾನೇಜರ್ಸ್ ಪ್ರೈವೇಟ್ ಲಿಮಿಟೆಡ್ ಹೊಂದಿದೆ. ಅಗತ್ಯವಿದ್ದಲ್ಲಿ ಪೂರ್ವ ಸೂಚನೆ ಅಥವಾ ವಿವರಣೆಯಿಲ್ಲದೆ ಸ್ಥಾನ ಬದಲಾವಣೆ ಮಾಡುವ ಅಧಿಕಾರವೂ ಸಂಸ್ಥೆಗೆ ಇದೆ.