Thursday, 30th November 2023

ಜೆ.ಪಿ.ನಡ್ಡಾ ಟ್ವಿಟರ್ ಖಾತೆ ಹ್ಯಾಕ್

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾ ಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಟ್ವಿಟರ್‍ನ್ನು ಬ್ಲೂ ಟಿಕ್ ಮೂಲಕ ದೃಢೀಕರಿಸಿದೆ. ಜಗತ್ ಪ್ರಕಾಶ್ ನಡ್ಡ ಹೆಸರಿನ ಅಕೃತ ಖಾತೆಯನ್ನು ಹ್ಯಾಕ್ ಮಾಡಲಾ ಗಿದ್ದು, ಐಸಿಜಿ ಓನ್ಸ್ ಇಂಡಿಯಾ ಎಂದು ಹೆಸರು ಬದಲಾವಣೆ ಮಾಡಲಾಗಿದೆ.

ಸುಮಾರು 2.7 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಖಾತೆಯಲ್ಲಿ ಹೆಸರು ಬದಲಾವಣೆಗೂ ಮುನ್ನ ಟ್ವಿಟ್ ಮಾಡಲಾಗಿದ್ದು, ಉಕ್ರೇನ್‍ನ ಜನರ ಜೊತೆ ನಿಲ್ಲಬೇಕಿದೆ. ಅದಕ್ಕಾಗಿ ಕ್ರಿಪ್ಟೋ ಕರೆನ್ಸಿ ಮೂಲಕ ದೇಣಿಗೆ ಸ್ವೀಕರಿಸುತ್ತೇವೆ. ಬಿಟ್ ಕಾಯಿನ್ ಮತ್ತು ಎಥಿರಿಯಂ ಕರೆನ್ಸಿ ಮೂಲಕ ದೇಣಿಗೆ ನೀಡಿ ಎಂದು ಇಂಗ್ಲಿಷ್‍ನಲ್ಲಿ ಬರೆದು ಬಿಟ್ ಕಾಯಿನ್ ಮತ್ತು ಎಥಿರಿಯಂ ಕರೆನ್ಸಿಗಳ ವೆಬ್ ಲಿಂಕ್‍ನ್ನು ನಡ್ಡ ಅವರ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ ತಕ್ಷಣವೇ ಹ್ಯಾಕಿಂಗ್‍ನ್ನು ಗುರುತಿಸಿದ್ದು, ಲೋಪವನ್ನು ಸರಿಪಡಿಸಿದೆ. ಈ ಮೊದಲು ಪ್ರಧಾನಿ ನರೇಂದ್ರಮೋದಿ ಅವರ ಖಾತೆಯನ್ನೂ ಕೂಡ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದರು.

error: Content is protected !!