Friday, 20th September 2024

ಜೂನ್ ತ್ರೈಮಾಸಿಕದಲ್ಲಿ ಯುಪಿಐ ವಹಿವಾಟು ಶೇ.36ರಷ್ಟು ಹೆಚ್ಚಳ

ವದೆಹಲಿ: 2024- 25ರ ಹಣಕಾಸು ವರ್ಷದ ಜೂನ್ ತ್ರೈಮಾಸಿಕದಲ್ಲಿ ಯುಪಿಐ ವಹಿವಾಟು ಶೇಕಡ 36ರಷ್ಟು ಹೆಚ್ಚಳವಾಗಿದೆ.

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಜೂನ್ ತ್ರೈಮಾಸಿಕದಲ್ಲಿ 60 ಲಕ್ಷ ಕೋಟಿ ಮೌಲ್ಯದ 4122 ಕೋಟಿ ಯುಪಿಐ ವಹಿವಾಟು ನಡೆದಿವೆ.

ಕಳೆದ ಹಣಕಾಸು ವರ್ಷದ ಇದೇ ಅವಧಿಯಲ್ಲಿ 2762 ಕೋಟಿ ವಹಿವಾಟು ನಡೆದಿದ್ದವು. ಇದರ ಮೊತ್ತ 44 ಲಕ್ಷ ಕೋಟಿ ರೂ.ನಷ್ಟು ಆಗಿತ್ತು ಎಂದು ಮಾಹಿತಿ ನೀಡಿದ್ದಾರೆ.

2023- 24ನೇ ಪೂರ್ಣ ಹಣಕಾಸು ವರ್ಷದಲ್ಲಿ 13,113 ಕೋಟಿ ಯುಪಿಐ ವಹಿವಾಟು ನಡೆದಿದ್ದು, ಇದರ ಮೌಲ್ಯ 200 ಲಕ್ಷ ಕೋಟಿ ರೂ. ಆಗಿದೆ. 2022- 23ರಲ್ಲಿ 139 ಲಕ್ಷ ರೂ.ಮೊತ್ತದ 8371 ಕೋಟಿ ವಹಿವಾಟು ನಡೆದಿದ್ದು, 2021- 22 ರಲ್ಲಿ 84 ಲಕ್ಷ ಕೋಟಿ ರೂ. ಮೊತ್ತದ 4596 ಕೋಟಿ ವಹಿವಾಟು ನಡೆದಿದೆ.