Friday, 13th December 2024

ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಕೆ.ವಿ.ಸುಬ್ರಮಣಿಯನ್ ರಾಜೀನಾಮೆ

ನವದೆಹಲಿ: ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಹುದ್ದೆಗೆ ಕೆ.ವಿ ಸುಬ್ರಮಣಿ ಯನ್ ಸಲ್ಲಿಸಿದ್ದಾರೆ.

ಸುಬ್ರಮಣಿಯನ್ ಅವರು ಡಿಸೆಂಬರ್ 7, 2018 ರಂದು ಸಿಇಎ ಉಸ್ತುವಾರಿ ವಹಿಸಿ ಕೊಂಡಿದ್ದರು, ಅವರ ಹಿಂದಿನ ಅರವಿಂದ ಸುಬ್ರಮಣಿಯನ್ ಅವರು ಈ ಪಾತ್ರವನ್ನು ತೊರೆದ ಸುಮಾರು ಐದು ತಿಂಗಳ ನಂತರ ಸಿಇಒ ಸ್ಥಾನ ಪಡೆದರು.

ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನನ್ನ 3 ವರ್ಷಗಳನ್ನ ಅವಧಿ ಯನ್ನು ಪೂರ್ಣಗೊಳಿಸಿದ ನಂತರ ನಾನು ಅಕಾಡೆಮಿಗೆ ಮರಳಲು ನಿರ್ಧರಿಸಿದ್ದೇನೆ” ಎಂದು ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.

ಸುಬ್ರಮಣಿಯನ್ ಅವರು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗಾಗಿ ಪರಿಣಿತ ಸಮಿತಿಯ ಭಾಗವಾಗಿದ್ದರು. ಜೆಪಿ ಮೋರ್ಗಾನ್ ಚೇಸ್, ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌(ಟಿಸಿಎಸ್‌) ಸೇರಿದಂತೆ ಉನ್ನತ ಕಾರ್ಪೊರೇಟ್‌ಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಶೈಕ್ಷಣಿಕವಾಗಿ, ಸುಬ್ರಮಣಿಯನ್ ಅವರು ಯುನೈಟೆಡ್ ಸ್ಟೇಟ್ಸ್‌ನ ಎಮೊರಿ ವಿಶ್ವವಿದ್ಯಾಲಯದ ಗೊಯಿಜುಟಾ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಹಣಕಾಸು ವಿಭಾಗದಲ್ಲಿ ಫ್ಯಾಕಲ್ಟಿ ಆಗಿದ್ದರು.

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರು ತಮ್ಮ ಮೂರು ವರ್ಷದ ಅಧಿಕಾರಾವಧಿಯನ್ನು ಡಿಸೆಂಬರ್ ಆರಂಭದಲ್ಲಿ ಪೂರ್ಣಗೊಳಿಸಿದ ನಂತರ ಅಕಾಡೆಮಿಗೆ ಮರಳಲು ನಿರ್ಧರಿಸಿದ್ದಾರೆ.

ಐಐಟಿ ಕಾನ್ಪುರ್ ಮತ್ತು ಐಐಎಂ ಕಲ್ಕತ್ತಾ ಹಳೆಯ ವಿದ್ಯಾರ್ಥಿ, ಶ್ರೀ ಸುಬ್ರಮಣಿಯನ್ ಅವರು ಡಿಸೆಂಬರ್ 2018 ರಲ್ಲಿ ಸಿಇಎ ಆಗಿ ನೇಮಕಗೊಳ್ಳುವ ಮುನ್ನ ಭಾರತೀಯ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು.