Tuesday, 15th October 2024

ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರ

ಲಖನ್‌: ‘ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ’ ಎಂದು ಸಂಜಯ್‌ ಗಾಂಧಿ ವೈದ್ಯಕೀಯ ವಿಜ್ಞಾನ ಗಳ ಸ್ನಾತಕೋತ್ತರ ಸಂಸ್ಥೆಯು ಭಾನುವಾರ ಹೇಳಿದೆ.

ರಾಜಸ್ಥಾನದ ಮಾಜಿ ರಾಜ್ಯಪಾಲ ಆಗಿರುವ ಕಲ್ಯಾಣ್‌ ಸಿಂಗ್‌(89) ಅವರು ಸೋಂಕು ಮತ್ತಿತರ ಆರೋಗ್ಯ ಸಮಸ್ಯೆಯಿಂದಾಗಿ ಜು.4 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ‘ಸಿಸಿಎಂ, ಹೃದ್ರೋಗ, ನರರೋಗ, ನೆಪ್ರೊಲಜಿ ಸೇರಿದಂತೆ ವಿವಿಧ ವಿಭಾಗಗಳ ತಜ್ಞರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

‘ಕಲ್ಯಾಣ್ ಸಿಂಗ್ ಅವರಿಗೆ ಮಂಗಳವಾರ ಸಂಜೆಯಿಂದ ಕೃತಕ ಉಸಿರಾಟ ವ್ಯವಸ್ಥೆ ಅಳವಡಿಸಲಾಗಿದೆ. ಆದರೆ, ಇದುವರೆಗೆ ಚೇತರಿಕೆ ಕಂಡು ಬಂದಿಲ್ಲ’ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.