ಬೆಂಗಳೂರು: ಕರ್ನಾಟಕ ತಂಡದ ಆಲ್‌ರೌಂಡರ್ ಗೌತಮ್ ರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸಿ, 9.25 ಕೋಟಿ ನೀಡಿ ಖರೀದಿಸಿದೆ.
ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗುತ್ತಿರುವ ಭಾರತ ತಂಡದಲ್ಲಿ ನೆಟ್ಸ್ ಬೌಲರ್ ಆಗಿದ್ದಾರೆ. ಹೋದ ವರ್ಷ ಕಿಂಗ್ಸ್ ಇಲೆವನ್ ಪಂಜಾಬ್ ತಂಡ (ಕಿಂಗ್ಸ್ ಪಂಜಾಬ್) ವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿಯೂ ಇದ್ದರು. ಒಟ್ಟು 24 ಪಂದ್ಯಗಳನ್ನು ಆಡಿರುವ ಗೌತಮ್ 186 ರನ್ ಗಳಿಸಿದ್ದಾರೆ. 13 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ.
ಇದೀಗ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡದಲ್ಲಿ ಐಪಿಎಲ್‌ನಲ್ಲಿ ಕಣಕ್ಕಿಳಿಯಲಿದ್ದಾರೆ. ಚೆನ್ನೈ ತಂಡವು ಇಂಗ್ಲೆಂಡ್‌ನ ಮೋಯಿನ್ ಅಲಿ ಅವರನ್ನು ಏಳು ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.