Saturday, 14th December 2024

ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ ಇನ್ನಿಲ್ಲ

ತಿರುವನಂತಪುರ: ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ (81) ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ನಿಧನರಾದರು. ‘ಕೆಲವು ಸಮಯದಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು’ ಎಂದು ಮೂಲಗಳು ಹೇಳಿವೆ.

ಶಾಸ್ತ್ರೀಯ ನೃತ್ಯ ನಾಟಕದಲ್ಲಿ ಖಳನಾಯಕನಂತಹ ‘ಚುವಣ್ಣ ತಡಿ’ (ಕೆಂಪು ಗಡ್ಡ) ಪಾತ್ರಗಳಿಂದ ಖ್ಯಾತಿ ಗಳಿಸಿದ್ದರು. ‘ವಟ್ಟಮುಡಿ’ ಮತ್ತು ‘ಪೆಂಕರಿ’ ಅಂತಹ ಪಾತ್ರಗಳನ್ನು ನಿರ್ವಹಿಸುವಲ್ಲಿ ಪರಿಣಿತಿಯನ್ನು ಪಡೆದಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ರಾಜ್ಯ ಕಥಕ್ಕಳಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ಅವರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.