Wednesday, 11th December 2024

ಮೇ.17 ರಂದು ಕೇದಾರನಾಥ ದೇವಾಲಯ ದರ್ಶನಕ್ಕೆ ಮುಕ್ತ

ಕೇದಾರನಾಥ: ಉತ್ತರಾಖಂಡ್ ರಾಜ್ಯದ ರುದ್ರಪ್ರಯಾಗ್ ಜಿಲ್ಲೆಯಲ್ಲಿನ ಕೇದಾರನಾಥ ದೇವಾಲಯ ಮೇ.17 ರಂದು ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರಲಿದೆ. ಚಾರ್ ಧಾಮ್ ದೇವಸ್ಥಾನಮ್ ಮ್ಯಾನೇಜ್ಮೆಂಟ್ ಬೋರ್ಡ್ ಈ ಬಗ್ಗೆ ಮಾಹಿತಿ ನೀಡಿದೆ.

ದೇವಸ್ಥಾನಮ್ ಬೋರ್ಡ್ ನ ಮಾಹಿತಿಯಂತೆ ಚಳಿಗಾಲದಲ್ಲಿ ಉಖಿಮಠ್ ನಲ್ಲಿದ್ದ ದೇವರನ್ನು ಕೇದಾರನಾಥದಲ್ಲಿ ಮೇ.14 ರಂದು ಮರಳಿ ಸ್ಥಾಪಿಸಲಾಗುತ್ತದೆ. ಮೇ.17 ರಂದು ಕೇದಾರನಾಥಧಾಮ ಭಕ್ತಾದಿಗಳ ದರ್ಶನಕ್ಕೆ ಮುಕ್ತವಾಗಿರಲಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ಚಳಿಗಾಲ ಪ್ರಾರಂಭವಾದ ಬೆನ್ನಲ್ಲೇ ದೇವಾಲಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.