Wednesday, 11th December 2024

ಸಮಾಜ ವಿರೋಧಿ ಚಟುವಟಿಕೆ: 2,500 ಜನರ ಬಂಧನ

ತಿರುವನಂತಪುರ: ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಕೇರಳ ಪೊಲೀಸರು ರಾಜ್ಯದಾದ್ಯಂತ ಒಂದೇ ದಿನ 2,500ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಯುವ ಭಾಗವಾಗಿ ರಾಜ್ಯದಾದ್ಯಂತ 2,507 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರುವರಿ 4ರಿಂದ 3,501 ಸ್ಥಳಗಳಲ್ಲಿ ದಾಳಿ ನಡೆಸಿ ಒಟ್ಟು 1,673 ಪ್ರಕರಣಗಳನ್ನು ದಾಖಲಿಸ ಲಾಗಿದೆ.

ಬಳಿಕ ತಪ್ಪಿತಸ್ಥರನ್ನು ಬಂಧಿಸಲಾಗಿದೆ. ತಿರುವನಂತಪುರದಲ್ಲಿ 333, ಕೋಯಿಕ್ಕೋಡ್‌ 272, ಕಣ್ಣೂರು ಜಿಲ್ಲೆಯಲ್ಲಿ 257 ಪ್ರಕರಣಗಳು ದಾಖಲಾಗಿವೆ. ತ್ರಿಶೂರ್‌ನಲ್ಲಿ 214 ಪ್ರಕರಣಗಳು ದಾಖಲಾಗಿದ್ದು, 301 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.