Saturday, 14th December 2024

ಬಾಂಬ್‌ ಸ್ಫೋಟದಲ್ಲಿ ಕೈ ಕಳೆದುಕೊಂಡ ಯುವಕ

ಣ್ಣೂರು: ಕೇರಳದ ತಲಶ್ಶೇರಿಯ ಎರಂಜೊಲಿಪಲಂ ಪ್ರದೇಶದ ಮನೆಯೊಂದರ ಹಿಂಬ ದಿಯ ಹಿತ್ತಲಿನಲ್ಲಿ ನಡೆದ ಬಾಂಬ್‌ ಸ್ಫೋಟವೊಂದರಲ್ಲಿ ಯುವಕ ತನ್ನ ಒಂದು ಕೈ ಕಳೆದುಕೊಂಡಿದ್ದಾನೆ.

ಯುವಕ ಮನೆಯಂಗಳದಲ್ಲಿ ಬಾಂಬ್‌ ತಯಾರಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿರ ಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಘಟನೆ ನಡೆದಿದೆ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಕೊಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಸ್ಫೋಟಕಗಳ ಕಾಯಿದೆಯಡಿ ಕೇಸ್‌ ದಾಖಲಿಸಲಾಗಿದೆ.

ಗಾಯಾಳು ಯುವಕ ವಿಷ್ಣು ಚೇತರಿಸಿಕೊಂಡ ನಂತರ ಆತನ ವಿಚಾರಣೆಯ ನಂತರವಷ್ಟೇ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂಬ ಮಾಹಿತಿಯಿದೆ.

ಗಾಯಾಳು ವಿಷ್ಣು ಆರೆಸ್ಸೆಸ್‌ (RSS) ಕಾರ್ಯಕರ್ತ ಹಾಗೂ ಆತ ಬಾಂಬ್‌ ತಯಾರಿಸುತ್ತಿರು ವಾಗ ಅದು ಸ್ಫೋಟಗೊಂಡಿತು ಎಂದು ಸಿಪಿಐ(ಎಂ) ಆರೋಪಿಸಿದೆ.