Friday, 13th December 2024

ಮಹೀಂದ್ರ ಗ್ರೂಪ್​ನ ಮಾಜಿ ಛೇರ್ಮನ್ ಕೇಶುಬ್ ಮಹೀಂದ್ರ ನಿಧನ

ನವದೆಹಲಿ: ಭಾರತ ಕಂಡ ಶ್ರೇಷ್ಠ ಉದ್ಯಮಿಗಳ ಪೈಕಿ ಒಬ್ಬರೆನಿಸಿದ್ದ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್​ನ ಮಾಜಿ ಛೇರ್ಮನ್ ಆಗಿದ್ದ ಕೇಶುಬ್ ಮಹೀಂದ್ರ ಬುಧವಾರ ನಿಧನರಾಗಿದ್ದಾರೆ.

99 ವರ್ಷದ ಕೇಶಬ್ ಮಹೀಂದ್ರ ಸ್ವರ್ಗಸ್ಥರಾದರೆಂದು ಬಾಹ್ಯಾಕಾಶ ಇಲಾಖೆಯ ಇನ್​ಸ್ಪೇಸ್ ಸಂಸ್ಥೆಯ ಛೇರ್ಮನ್ ಪವನ್ ಕೆ ಗೋಯೆಂಕಾ ಇಂದು ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಕೇಶಬ್ ಮಹೀಂದ್ರ ಕೇವಲ ಉದ್ಯಮಿ ಮಾತ್ರವಾಗಿರದೇ ಸಾಮಾಜಿಕ ಕಾಳಜಿ ಇಟ್ಟುಕೊಂಡಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಸರ್ಕಾರದ ಹಲವು ಸಮಿತಿಗಳಲ್ಲಿ ಅವರು ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪವನ್ ಗೋಯಂಕಾ, ಔದ್ಯಮಿಕ ಜಗತ್ತು ಇವತ್ತು ಅತ್ಯುತ್ತಮ ವ್ಯಕ್ತಿತ್ವವನ್ನು ಕಳೆದುಕೊಂಡಿತು ಎಂದು ಹೇಳಿದ್ದಾರೆ.