Friday, 13th December 2024

ಜೋಶಿಮಠದ 561 ಮನೆಗಳಲ್ಲಿ ಬಿರುಕು

ತಿಮಾ: ನಿರಂತರ ಭೂಮಿ ಕುಸಿತದ ಪರಿಣಾಮವಾಗಿ ಜೋಶಿಮಠದ 561 ಮನೆಗಳಲ್ಲಿ ಬಿರುಕುಗಳು ಉಂಟಾಗಿವೆ.

ಮನೆಗಳಲ್ಲಿ ಬಿರುಕು ಕಾಣಿಸಿಕೊಂಡ ನಂತರ, ಒಟ್ಟು 66 ಕುಟುಂಬಗಳು ಜೋಶಿಮಠದಿಂದ ವಲಸೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಸಿಂಘಧಾರ್ ಹಾಗೂ ಮಾರ್ವಾಡಿಯಲ್ಲಿ ಬಿರುಕುಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸಿಂಗ್ಧರ್ ಜೈನ್ ಪ್ರದೇಶದ ಬಳಿಯ ಬದರಿನಾಥ್ ರಾಷ್ಟ್ರೀಯ ಹೆದ್ದಾರಿ ಹಾಗೂ ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿಯ ಮಾರ್ವಾಡಿಯ ಜೆಪಿ ಕಂಪನಿ ಗೇಟ್ ನಿರಂತರವಾಗಿ ಬಿರುಕು ಬಿಡುತ್ತಿದೆ. ಪ್ರತಿ ಗಂಟೆಗೂ ಈ ಬಿರುಕು ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ ಎಂದು ಜೋಶಿಮಠ ಪುರಸಭೆ ಅಧ್ಯಕ್ಷ ಶೈಲೇಂದ್ರ ಪವಾರ ಹೇಳಿದರು.

ಮಾರ್ವಾಡಿಯಲ್ಲಿ ಒಂಬತ್ತು ಮನೆಗಳು ಬಿರುಕು ಬಿಟ್ಟಿದ್ದು, ವಾರ್ಡ್‌ನ ಬಹುತೇಕ ಸಾರ್ವಜನಿಕ ರಸ್ತೆಗಳಲ್ಲಿ ಬಿರುಕು ಕಾಣಿಸಿ ಕೊಂಡಿದೆ ಎಂದು ಜೋಶಿಮಠದ ನಗರಸಭೆ ಅಧ್ಯಕ್ಷ ತಿಳಿಸಿದರು

ಜೋಶಿಮಠದ ಮಾರ್ವಾಡಿ ವಾರ್ಡ್‌ನ ಜೆಪಿ ಕಾಲೋನಿಯಲ್ಲಿ ಭೂಗತ ನೀರು ಸೋರಿಕೆಯಾದ ಪ್ರಕರಣಗಳನ್ನು ವರದಿ ಮಾಡಿದೆ.

Read E-Paper click here