ನವದೆಹಲಿ: ಮಿಸ್ ಇಂಡಿಯಾ ವಿಜೇತರ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿ ಸಮುದಾಯದ ಮಹಿಳೆ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆಯನ್ನು ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವ ಕಿರಣ್ ರಿಜಿಜು ರಾಹುಲ್ಗಾಂಧಿ ಅವರನ್ನು ಭಾನುವಾರ ಟೀಕಿಸಿದ್ದಾರೆ.
ಈಗ ರಾಹುಲ್ ಗಾಂಧಿ ಅವರು ಮಿಸ್ ಇಂಡಿಯಾ ಸ್ಪರ್ಧೆಗಳು, ಚಲನಚಿತ್ರಗಳು, ಕ್ರೀಡೆಗಳಲ್ಲಿಯೂ ಮೀಸಲಾತಿ ಬಯಸಿದ್ದಾರೆ! ರಾಷ್ಟ್ರವ್ಯಾಪಿ ಜಾತಿಗಣತಿಗೆ ಸಂಬಂಧಿಸಿದಂತೆ ರಾಹುಲ್ಗಾಂಧಿ ಅವರು ತಮ್ಮ ಹೊಸ ಟೀಕೆಗಳೊಂದಿಗೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಐಎಎಸ್, ಐಪಿಎಸ್, ಐಎಫ್‌ಎಸ್, ಎಲ್ಲಾ ಉನ್ನತ ಸೇವೆಗಳ ನೇಮಕಾತಿಯಲ್ಲಿ ಮೀಸಲಾತಿಯನ್ನು ಬದಲಾಯಿಸಲು ಸುಪ್ರೀಂಕೋರ್ಟ್‌ಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರಗಳು ಮಿಸ್ ಇಂಡಿಯಾ ಅಭ್ಯರ್ಥಿಗಳನ್ನು, ಒಲಿಂಪಿಕ್ಸ್‌ಗೆ ಕ್ರೀಡಾಪಟುಗಳನ್ನು ಅಥವಾ ಚಲನಚಿತ್ರಗಳಿಗೆ ನಟರನ್ನು ಆಯ್ಕೆ ಮಾಡುವುದಿಲ್ಲ ಎಂದು ಹೇಳಿದರು.
ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯ ಪಟ್ಟಿಯಲ್ಲಿ ದಲಿತ, ಬುಡಕಟ್ಟು ಅಥವಾ ಇತರ ಹಿಂದುಳಿದ ವರ್ಗಗಳ ಸಮುದಾಯಗಳ ಮಹಿಳೆಯರಿಗೆ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದರು.