ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಸಿಖ್ ಸಮುದಾಯದ ಪ್ರಯಾಣಿಕರು ಮತ್ತು ನೌಕರರು ಕಿರ್ಪಾನ್ ತೆಗೆದುಕೊಂಡು ಹೋಗುವ ನಿರ್ಬಂಧವನ್ನು ಕೇಂದ್ರ ಸರ್ಕಾರ ತೆರವು ಮಾಡಿದೆ.
ದೇಶಿಯ ವಿಮಾನ ನಿಲ್ದಾಣಗಳು ಮತ್ತು ವಿಮಾನಗಳಲ್ಲಿ ಇದನ್ನು ಸಾಗಿಸಲು ಅವಕಾಶ ನೀಡಲಾಗಿದ್ದು, ಆದರೆ ಕಿರ್ಪಾನ್ ಉದ್ದ 15.23 ಸೆಂಟಿಮೀಟರ್ (6 ಇಂಚು) ಮೀರಬಾರದು ಎಂದು ನಾಗರಿಕ ವಿಮಾನಯಾನ ಇಲಾಖೆ ಆದೇಶ ಹೊರಡಿಸಿದೆ. ಸಿಖ್ಖರ ಐದು ವಿಶಿಷ್ಟ ಗುರುತುಗಳಲ್ಲಿ ಕಿರ್ಪಾನ್ (ಚಾಕು) ಕೂಡ ಒಂದಾಗಿದೆ.
ಭಾರತದೊಳಗೆ ಭಾರತೀಯ ವಿಮಾನಗಳಲ್ಲಿ ಪ್ರಯಾಣಿಸುವಾಗ ಇದನ್ನು ಅನು ಮತಿಸಲಾಗಿದೆ’ ಎಂದು ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಹೇಳಿಕೆ ತಿಳಿಸಿದೆ. ಈ ಹಿಂದೆ ಅಮೃತಸರ್ ವಿಮಾನ ನಿಲ್ದಾಣದಲ್ಲಿ ಕಿರ್ಪಾನ್ ಧರಿಸಿದ ಕಾರಣಕ್ಕೆ ಸಿಖ್ ಉದ್ಯೋಗಿಯೊಬ್ಬರಿಗೆ ಕರ್ತವ್ಯ ನಿರ್ವಹಿಸದಂತೆ ನಿರ್ಬಂಧ ಹೇರಲಾಗಿತ್ತು.