Saturday, 14th December 2024

ಕಳಮಶ್ಶೇರಿ ಬಾಂಬ್‌ ಸ್ಪೋಟ: ಆರೋಪಿಗೆ ನ. 15 ರವರೆಗೆ ನ್ಯಾಯಾಂಗ ಬಂಧನ

ಕೊಚ್ಚಿ: ಕೇರಳದ ಕಳಮಶ್ಶೇರಿಯಲ್ಲಿ ಬಾಂಬ್‌ ಸ್ಪೋಟ ನಡೆಸಿ ನಾಲ್ವರ ಸಾವಿಗೆ ಕಾರಣನಾಗಿದ್ದ ಆರೋಪಿ ಡೊಮೆನಿಕ್‌ ಗೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ. 15 ರವರೆಗೆ ಡೊಮೆನಿಕ್‌ ವಿಚಾರಣೆ ನಡೆಸಲು ಪೊಲೀಸರಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಸೋಮವಾರ ಮುಂಜಾನೆ ಡೊಮೆನಿಕ್‌ ನನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು ಬಳಿಕ ಎರ್ನಾಕುಲಂನಲ್ಲಿರುವ ಪ್ರಿನ್ಸಿಪಲ್‌ ಸೆಷನ್‌ ಕೋರ್ಟಿಗೆ ಹಾಜರುಪಡಿಸಿದ್ದರು.
ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಗೆ ನೀಡಿದ ಡೊಮೆನಿಕ್‌, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಒಪ್ಪಿಕೊಂಡಿದ್ದಾನೆ.

ಸ್ಫೋಟಕವನ್ನು ಈತ ಹೇಗೆ ಸಂಗ್ರಹಿಸಿದ, ಅದಕ್ಕೆ ಆರ್ಥಿಕ ಮೂಲ ಎಲ್ಲಿಂದ ಬಂತು, ಯಾವುದಾದರೂ ಅಂತಾರಾಷ್ಟ್ರೀಯ ಉಗ್ರರೊಡನೆ ಸಂಪರ್ಕ ಹೊಂದಿದ್ದಾನೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸಲಿದ್ದಾರೆ.