Wednesday, 11th December 2024

ರೈಲು ಅಪಘಾತ: ಕ್ರಿಕೆಟರ್ ವಿರಾಟ್ ಕೊಹ್ಲಿ, ಸಲ್ಮಾನ್ ಖಾನ್ ಸಂತಾಪ

ನವದೆಹಲಿ:ರೈಲ್ವೆ ಇತಿಹಾಸದಲ್ಲಿಯೇ ಭೀಕರ ಅಪಘಾತಗಳಲ್ಲಿ ಒಂದಾದ ಈ ರೈಲು ಅಪಘಾತಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ಕ್ರಿಕೆಟರ್ ವಿರಾಟ್ ಕೊಹ್ಲಿ ಸಹ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿ ದ್ದಾರೆ.
ಅಪಘಾತದ ಸುದ್ದಿಯನ್ನು ಕೇಳಿ ನಿಜವಾಗಿಯೂ ದುಃಖವಾಗಿದೆ. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ. ಈ ದುರದೃಷ್ಟಕರ ಅಪಘಾತದಿಂದ ಗಾಯಗೊಂಡ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ಮತ್ತು ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್ಪ್ರೆಸ್ ಎಂಬ ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲನ್ನು ಒಳಗೊಂಡ ಒಡಿಶಾದ ಬಾಲಸೋರ್‌’ನಲ್ಲಿ ನಡೆದ ರೈಲು ಅಪಘಾತದಲ್ಲಿ ಸಾವಿನ ಸಂಖ್ಯೆ 261ಕ್ಕೆ ಏರಿದೆ ಎಂದು ಆಗ್ನೇಯ ರೈಲ್ವೆ ಶನಿವಾರ ತಿಳಿಸಿದೆ.
 ‘ಅಪಘಾತದಲ್ಲಿ 238 ಮಂದಿ ಸಾವಿಗೀಡಾಗಿದ್ದಾರೆ. ಸುಮಾರು 650 ಗಾಯಗೊಂಡ ಪ್ರಯಾಣಿಕರನ್ನು ಗೋಪಾಲ್ಪುರ, ಖಾಂತಪಾರಾ, ಬಾಲಸೋರ್, ಭದ್ರಕ್ ಮತ್ತು ಸೊರೊ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ’ ಎಂದು ಆಗ್ನೇಯ ರೈಲ್ವೆ ತಿಳಿಸಿದೆ.