Friday, 13th December 2024

ಈ ಬಾರಿ 30 ದಿನ ಕುಂಭಮೇಳ: ಏಪ್ರಿಲ್ 1 ರಿಂದ ಆರಂಭ

ಡೆಹರಾಡೂನ್ : ಕೋವಿಡ್ ಸಾಂಕ್ರಾಮಿಕದ ನಡುವೆ ಉತ್ತರಾಖಂಡ ಸರ್ಕಾರವು ಕುಂಭ ಮೇಳ ಆಯೋಜಿಸುತ್ತಿದ್ದು, ಕೇವಲ 30 ದಿನ ನಡೆಯಲಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 30ರವರೆಗೆ 30 ದಿನಗಳ ಕಾಲ ಮೇಳ ನಡೆಯಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಈ ಸಂಬಂಧ ಸೂಚನೆ ಹೊರಡಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಓಂ ಪ್ರಕಾಶ್ ತಿಳಿಸಿದ್ದಾರೆ. ಕೊರೋನಾ ವೈರಸ್ ಹೆಚ್ಚಬಹುದು ಎಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮೇಳದಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳು ಪಾಸ್‌ಗಳನ್ನು ಪಡೆದುಕೊಳ್ಳುವುದು ಕಡ್ಡಾಯ. ಭಕ್ತರು ಕೊರೋನಾ ನೆಗೆಟಿವ್ ವರದಿ ನೀಡಿದರೆ ಮಾತ್ರ ಪಾಸ್ ನೀಡಲಾಗುವುದು ಎಂದು ತಿಳಿದು ಬಂದಿದೆ.